Publish Date: Wed, 05 Jan 2022 (08:18 IST)
Updated Date: Wed, 05 Jan 2022 (09:22 IST)
ನವದೆಹಲಿ : ಭಾರತದಲ್ಲಿ ಕೇವಲ ಒಂದು ದಿನದಲ್ಲಿ ಕೋವಿಡ್-19 ಪ್ರಕರಣಗಳು 50 ಸಾವಿರದ ಗಡಿ ದಾಟಿದೆ.
ಅತ್ಯಂತ ಹೆಚ್ಚು ಕೋವಿಡ್ ಕೇಸ್ಗಳನ್ನು ವರದಿ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.
ಮಹರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕರ್ನಾಟಕ ಹೀಗೆ ಹಲವು ರಾಜ್ಯಗಳು ಅತೀ ಹೆಚ್ಚು ಕೋವಿಡ್ ಕೇಸ್ಗಳನ್ನು ವರದಿ ಮಾಡಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿರುವ ವರದಿ ಹೀಗಿದೆ: ಮಹಾರಾಷ್ಟ್ರ – 18,466, ಪಶ್ಚಿಮ ಬಂಗಾಳ – 9,073, ದೆಹಲಿ – 5,481, ಕೇರಳ – 3,640, ತಮಿಳುನಾಡು – 2,731, ಕರ್ನಾಟಕ – 2,479, ಗುಜರಾತ್ – 2,265, ರಾಜಸ್ಥಾನ – 1,137, ತೆಲಂಗಾಣ – 1,052, ಪಂಜಾಬ್ – 1,027, ಬಿಹಾರ – 893, ಒಡಿಶಾ – 680, ಗೋವಾ – 592, ಆಂಧ್ರಪ್ರದೇಶ – 334, ಹಿಮಾಚಲ ಪ್ರದೇಶ – 260.
ಮಂಗಳವಾರದವರೆಗೆ ದೇಶದಲ್ಲಿ 147.62 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಹಾಗೂ ಸೋಮವಾರ 87,66,164 ಜನರು ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.