Publish Date: Fri, 09 Mar 2018 (15:31 IST)
Updated Date: Fri, 09 Mar 2018 (15:32 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರೇ ಸಚಿವ ರಮಾನಾಥ ರೈ ಕೊಲೆಗೆ ಹೊಂಚು ಹಾಕಿದ್ದರಾ? ಹೀಗೊಂದು ಸಂಗತಿಯನ್ನು ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಮಾನಾಥ ರೈ ನನಗೆ ಯಾವ ಭಯವೂ ಇಲ್ಲ. ನಾನು ಎಲ್ಲಾ ಧರ್ಮವನ್ನೂ ಗೌರವಿಸುತ್ತೇನೆ. ಎಲ್ಲಾ ದೇವರೂ ಒಬ್ಬನೇ ಎಂದು ನಂಬುವವನು. ಹೀಗಾಗಿ ನನಗೆ ಯಾವ ಭಯವೂ ಇಲ್ಲ ಎಂದಿದ್ದಾರೆ.
ಗೌರಿ ಹತ್ಯೆ ಆರೋಪವನ್ನು ಬಲವಂತವಾಗಿ ಆರೋಪಿ ಮೇಲೆ ಹೊರಿಸಿದ್ದಾರಾ ಪೊಲೀಸರು?!
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ನವೀನ್ ಕುಮಾರ್ ಗೆ ಬಲವಂತವಾಗಿ ಕೃತ್ಯದ ಆರೋಪ ಒಪ್ಪಿಕೊಳ್ಳುವಂತೆ ಮಾಡಲಾಗಿದೆಯೇ?
ಹಾಗಂತ ಆರೋಪಿ ಪರ ವಕೀಲರು ವಾದಿಸಿದ್ದಾರೆ. ಈಗಾಗಲೇ ಕೋರ್ಟ್ ಗೆ ಆರೋಪಿ ವಿಚಾರಣೆಯ ಅಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸಲ್ಲಿಸಲಾಗಿದೆ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.
ಇಷ್ಟು ದಿನ ಕಾಲ ಪೊಲೀಸರು ತಮ್ಮ ಕಸ್ಟಡಿಯಲ್ಲಿಟ್ಟುಕೊಂಡು ಆರೋಪಿಗೆ ಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ 18 ದಿನಕ್ಕೂ ಹೆಚ್ಚು ಕಾಲ ಹಿಂಸೆ ನೀಡಿದ್ದಾರೆ. ಇದಕ್ಕಿಂತ ಹೆಚ್ಚು ಗುಂಡಿಕ್ಕಿ ಕೊಲ್ಲುವುದು ಒಳ್ಳೆಯದಿತ್ತು ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.