Publish Date: Wed, 06 Sep 2017 (19:09 IST)
Updated Date: Wed, 06 Sep 2017 (19:12 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಯ ಕೃತ್ಯ. ಅವರ ಹತ್ಯೆ ನಮಗೆ ದಿಗ್ಭ್ರಮೆ ತಂದಿದೆ. ಪ್ರಗತಿಪರರು ಪಕ್ಷದತ್ತ ಬೆರಳು ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ದುಃಖಕ್ಕಿಂತ ಇವರಿಗೆ ಇದೊಂದು ಅಸ್ತ್ರವಾಗಿ ಸಿಕ್ಕಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಕ್ಕೆ ಸುರೇಶ್ ಕುಮಾರ್ ಟಾಂಗ್ ನೀಡಿದರು.
ಕಲಬುರ್ಗಿ ಹತ್ಯೆ ವೇಳೆ ಕೂಡ ಇದೇ ಆರೋಪ ಬಂದಿತ್ತು. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸೋಶಿಯಲ್ ಮೀಡಿಯಾಗಳು ಕೂಡ ಹಾಳಾಗುತ್ತಿವೆ. ಎಲ್ಲಾ ಸ್ವಾತಂತ್ರ್ಯ ಸಿಕ್ಕಿದೆ ಅನ್ನುವಂತೆ ವರ್ತಿಸುತ್ತಾರೆ. ಅಲ್ಲಿ ಕಮೆಂಟ್ ಗಳನ್ನ ಹಾಕ್ತಾರೆ. ಇಂತಹ ವಿಕೃತ ಮನಸ್ಸುಗಳ ಮೇಲೂ ಕ್ರಮತೆಗೆದುಕೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು.