Select Your Language

Notifications

webdunia
webdunia
webdunia
webdunia

ಮೇರಾ ಬಿಲ್ ಮೇರಾ ಅಧಿಕಾರ್ : 1 ಕೋಟಿ ರೂ. ಬಹುಮಾನ ಗೆಲ್ಲಿ

ಮೇರಾ ಬಿಲ್ ಮೇರಾ ಅಧಿಕಾರ್ : 1 ಕೋಟಿ ರೂ. ಬಹುಮಾನ ಗೆಲ್ಲಿ
ನವದೆಹಲಿ , ಶನಿವಾರ, 26 ಆಗಸ್ಟ್ 2023 (12:40 IST)
ನವದೆಹಲಿ : ಆರು ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 10,000 ರೂ. ನಿಂದ 1 ಕೋಟಿ ರೂ. ವರೆಗೆ ನಗದು ಬಹುಮಾನ ನೀಡುವ `ಮೇರಾ ಬಿಲ್ ಮೇರಾ ಅಧಿಕಾರ್’ ಯೋಜನೆಯನ್ನು ಸರ್ಕಾರ ಸೆ.1 ರಿಂದ ಪ್ರಾರಂಭಿಸಲಿದೆ.

ಗ್ರಾಹಕರು ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಪ್ರತಿ ಬಾರಿ ಕಡ್ಡಾಯವಾಗಿ ಬಿಲ್ ಕೇಳುವಂತೆ ಪ್ರೇರೇಪಿಸುವ ಗುರಿಯನ್ನು ಈ ಯೋಜನೆ ಹೋದಿದೆ. ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಆರಂಭದಲ್ಲಿ ಪ್ರಾರಂಭಿಸಲಾಗುತ್ತದೆ. ಪುದುಚೇರಿ, ದಮನ್, ದಿಯು, ದಾದ್ರಾ ಮತ್ತು ಹವೇಲಿಯ ಕೇಂದ್ರೀಯ ಆಡಳಿತ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗುತ್ತಿದೆ.

ಜಿಎಸ್ಟಿ ಬಿಲ್ಗಳನ್ನು ಅಪ್ಲೋಡ್ನಲ್ಲಿ ನಗದು ಬಹುಮಾನಗಳನ್ನು ಗಳಿಸಲು ಇನ್ವಾಯ್ಸ್ ಇನ್ಸೆಂಟಿವ್ ಸ್ಕೀಮ್ ನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಟ್ವೀಟ್ ಮಾಡಿದೆ. ಗ್ರಾಹಕರಿಗೆ ಸರಕು ಮತ್ತು ಸೇವಾ ತೆರಿಗೆ ನೋಂದಾಯಿತ ಪೂರೈಕೆದಾರರು ನೀಡಿದ ಎಲ್ಲಾ ಇನ್ವಾಯ್ಸ್ಗಳು ಯೋಜನೆಗೆ ಅರ್ಹವಾಗಿರುತ್ತವೆ. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾಗಳನ್ನು ಮಾಡಲಾಗುತ್ತದೆ. ವಿಜೇತರು ನಗದು ಬಹುಮಾನಗಳನ್ನು ಪಡೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಕ್ಸ್‌ನ ಸದಸ್ಯರ ವಿಸ್ತರಣೆಗೆ ಭಾರತದ ಬೆಂಬಲ : ನರೇಂದ್ರ ಮೋದಿ