Select Your Language

Notifications

webdunia
webdunia
webdunia
webdunia

ಇನ್ನಷ್ಟು ಉತ್ಕೃಷ್ಟ ಆಗಲಿದೆ ಕೆಎಂಎಫ್

KMF
bangalore , ಬುಧವಾರ, 2 ಆಗಸ್ಟ್ 2023 (14:30 IST)
ಜನಮನ್ನಣೆ ಹಾಗೂ ನಂಬಿಕೆ ಗಳಿಸಿರುವ ನಂದಿನಿ ಯಿಂದ ಇನ್ನಷ್ಟು ಆರೋಗ್ಯಕರ ಉತ್ಪನ್ನ ಮಾರುಕಟ್ಟೆಗೆ ಬರಲಿದೆ.ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲೂ  ಚಾಕೊಲೇಟ್ ಸಿಗಲಿದೆ.
 
ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಸರ್ವೇ ಪ್ರಕಾರ ದಿನದಿಂದ ದಿನಕ್ಕೆ ಕರ್ನಾಟಕ ಮೂಲದ ನಂದಿನಿ ಹೆಚ್ಚು ಜನ ಮನ್ನಣೆ ಗಳಿಸುತ್ತಿದೆ.ದೇಶದಲ್ಲಿ ಅತಿ ಹೆಚ್ಚು ಬಳಸುವ ಬ್ರಾಂಡ್ ನ ಪಟ್ಟಿ ಸಂಶೋಧನಾ ಗುಂಪು ಬಿಡುಗಡೆ ಮಾಡಿದೆ.ಆದ್ರಲ್ಲಿ ಪಾರ್ಲೆ- ಜಿ ಮೊದಲ ಸ್ಥಾನವನ್ನ ಗಿಟ್ಟಿಸಿಕೊಂಡಿದ್ರೆ,ಅಮೂಲ್ ಕಳೆದ ವರ್ಷ 2 ನೇ ಸ್ಥಾನದಲ್ಲಿದದ್ದು 3 ನೇ ಸ್ಥಾನಕ್ಕೆ ಕುಸಿದಿದೆ.ಇನ್ನು ನಂದಿನಿ ಬ್ರಾಂಡ್ ಕಳೆದ ವರ್ಷ 7 ನೇ ಸ್ಥಾನದಿಂದ ಈ ವರ್ಷ 6 ನೇ ಸ್ಥಾನಕ್ಕೆ ಬಂದಿದೆ.ಈಗಾಗಲೇ ದೇಶದಲ್ಲಿ  ತನ್ನ ಚಾಪು  ನಂದಿನಿ ಮೂಡಿಸುತ್ತಿದೆ.
 
ಚಾಕೊಲೇಟ್ ಫೀಲ್ಡ್ ಗೂ ಕೆಎಂಎಫ್ ಎಂಟ್ರಿಯಾಗಲು ಮುಂದಾಗಿದ್ದು,ಮಾರುಕಟ್ಟೆ ಫಿಲ್ಡ್ ಗೆ  ಆರೋಗ್ಯಕರ ನಂದಿನಿ ಚಾಕೊಲೇಟ್ ಎಂಟ್ರಿಕೊಡಲಿದೆ.ಹಾಲು,ತುಪ್ಪ ಹಾಗೂ ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳಲ್ಲಿ ಮಾತ್ರ  ಕೆಎಂಎಫ್ ಹೆಸರು ಗಳಿಸಿತ್ತು.ಸದ್ಯ ಚಾಕೊಲೇಟ್ ಕ್ಷೇತ್ರದಲ್ಲಿ ಡೈರಿ ಮಿಲ್ಕ್ ಒಂದೇ ದೊಡ್ಡ ಹೆಸರು ಗಳಿಸಿತ್ತು.ಈ ಡೈರಿ ಮಿಲ್ಕ್ ಗೆ ಕಾಂಪಿಟೇಷನ್ ನೀಡಲು ನಂದಿನಿ ಚಾಕೊಲೇಟ್ ಫೀಲ್ಡ್ ಗೆ ಎಂಟ್ರಿಕೊಡಲು ಮುಂದಾಗಿದೆ.ಜೊತೆಗೆ ಮಕ್ಕಳ ಪೌಷ್ಠಿಕ ಆಹಾರವೂ ಲಾಂಚ್ ಆಗಲಿದೆ.ಇದರ ಜೊತೆಗೆ ದೇಸಿ ಹಸುಗಳ ತುಪ್ಪ,ಹೀಗೆ ಕೆಎಂಎಫ್ ಮಕ್ಕಳ ಸೆಗ್ಮೆಂಟ್ನ ಪ್ರಾಡೆಕ್ಟ್ ಗೆ ಲಗ್ಗೆ ಇಡಲು ತೀರ್ಮಾನವಾಗಿದ್ದು,ಈ ಮೂಲಕ ನಂದಿನಿ ಬ್ರಾಂಡ್ ಗೆ ಇನ್ನಷ್ಟು ಬೇಡಿಕೆ ಹೆಚ್ಚು ಮಾಡಲು ಕೆಎಂಎಫ್ ಹೊರಟ್ಟಿದೆ.
 
ಆಗಿದ್ರೆ ನಂದಿನ ತಯಾರಾಗೋ ಹೊಸ ಪ್ರಾಡಕ್ಟ್ ಗಳು ಯಾವುವು?
 
ಪನ್ನಿರ್ ನಿಪ್ಪಟ್ಟು- ಇದ್ರಲ್ಲಿ 60 % ಪನ್ನಿರ್ ಇರಲಿದೆ
ಫೀನಟ್ ಚಿಕ್ಕಿ
ಕಡಲೆ ಮಿಠಾಯಿ
ಸ್ಪೇಷಲ್ ಮಿಲ್ಕ್ ಬರ್ಫಿ
ಬೆಲ್ಲದ ಪೇಡಾ
ಚಾಕೋಲೆಟ್ ಬಿಸ್ಕೆಟ್
ಬ್ಲಾಕ್ ಕರೆಂಟ್ ಚಾಕೋಲೇಟ್
ಆರೆಂಜ್ ಚಾಕೋಲೆಟ್
ಬ್ಲೂಬೆರಿ ಚಾಕೋಲೆಟ್
 
ಮಕ್ಕಳಗಾಗಿ  ನಂದಿಯಲ್ಲಿ ಪೊಷ್ಟಿಕ ಆಹಾರ ದೊರಕಲಿದೆ.ಬೊರ್ಮಿಟಾ ಹಾರ್ಲಿಕ್ಸ್ ರೀತಿಯಲ್ಲೇ ಮಕ್ಕಳಗಾಗಿ ಮಾಲ್ಟ್ ತಯಾರಿ ಮಾಡಲಾಗುತ್ತೆ.ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಜೊತೆಗೆ ಮಕ್ಕಳ ಆಹಾರದ ಮಾರುಕಟ್ಟೆಯಲ್ಲೂ ತನ್ನ ಚಾಪು ಕೆಎಂಎಫ್ ಮೂಡಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಆನ್‌ಲೈನ್ ಗೇಮ್ ನಿಷೇಧಕ್ಕೆ ಚಿಂತನೆ