Publish Date: Fri, 25 Aug 2023 (13:47 IST)
Updated Date: Fri, 25 Aug 2023 (13:00 IST)
ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಜನಸಾಗರ ತುಂಬಿ ತುಳುಕುತ್ತಿದೆ .ಕೆ ಆರ್ ಮಾರುಕಟ್ಟೆನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ವ್ಯಾಪಾರ ಮಾಡಲಾಗಿದೆ.ಹೂ ಹಣ್ಣು ಗಳ ಖರೀದಿಯಲ್ಲಿ ಸಾರ್ವಜನಿಕರು ನಿರಂತರಾಗಿದ್ದಾರೆ.ಬೆಲೆ ಏರಿಕೆ ಮದ್ಯೆಯೂ ಹಬ್ಬದ ವಾತಾವರಣ ಕಲೆಗುಂದಿದೆ.
ಕೆ ಆರ್ ಮಾರ್ಕೆಟ್ ಸದಾ ಜನ ಮತ್ತು ವ್ಯಾಪಾರಿಗಳಿಂದ ತುಂಬಿರುತ್ತೆ. ಇನ್ನು ಹಬ್ಬ ಹರಿದಿನಗಳಲ್ಲಿ ಕೇಳಬೇಕಾ? ನಾಳೆ ವರಮಹಾಲಕ್ಷ್ಮಿ ಹಬ್ಬ. ಹೀಗಾಗಿ ಮಾರ್ಕೆಟ್ ಫುಲ್ ರಶ್ ಆಗಿತ್ತು. ಎತ್ತ ನೋಡಿದರೂ ಜನಜಂಗುಳಿಯೆ ನೆರೆದಿತ್ತು. ನಾಳೆ ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದ್ದು, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಜನರು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಹೂವು, ಹಣ್ಣು ಖರೀದಿ ಭರಾಟೆ ಬಲು ಜೋರಾಗಿದೆ. ಹೀಗಾಗಿಯೇ ಜನ ಮಾರ್ಕೆಟ್ ನಲ್ಲಿ ಖರೀದಿಗಳಿಗಾಗಿ ಮುಕ್ಕುರಿದ್ದಾರೆ. ವರಮಹಾಲಕ್ಷ್ಮಿ ಆಚರಣೆಯಾಗಿ ಕೆ .ಆರ್.ಮಾರ್ಕೆಟ್ ನಲ್ಲಿ ಬೆಳಿಗ್ಗೆಯಿಂದಲೇ ಹೂವು, ಹಣ್ಣು ಖರೀದಿಗಾಗಿ ಮುಗಿಬಿದ್ದಿದ್ದರು. ಗ್ರಾಹಕರು ಖರೀದಿಯ ಉತ್ಸಾಹವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಜನಸಾಗರವೇ ಮಾರುಕಟ್ಟೆ ಬಳಿ ಹರಿದು ಬಂದಿತ್ತು. ಅಷ್ಟೇ ಅಲ್ಲದೇ ರಸ್ತೆಯುದ್ದಕ್ಕೂ ಹಬ್ಬದ ವಸ್ತುಗಳ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಡುವಂತಾಯಿತು.