Select Your Language

Notifications

webdunia
webdunia
webdunia
webdunia

ಶ್ರಾವಣಮಾಸ ಎಂಟ್ರಿ ಮಾರ್ಕೇಟ್ ಗೆ ರೆಡಿಮೆಡ್ ಲಕ್ಷ್ಮೀಯರು ಎಂಟ್ರಿ

ಶ್ರಾವಣಮಾಸ ಎಂಟ್ರಿ ಮಾರ್ಕೇಟ್ ಗೆ ರೆಡಿಮೆಡ್ ಲಕ್ಷ್ಮೀಯರು ಎಂಟ್ರಿ
bangalore , ಭಾನುವಾರ, 20 ಆಗಸ್ಟ್ 2023 (20:00 IST)
ಆಷಾಢ ಕಳೆದು ಶ್ರಾವಣ ಎಂಟ್ರಿ ಕೊಟ್ಟೆ ಬಿಡ್ತು. ಶ್ರಾವಣ ಮಾಸಕ್ಕಾಗಿ ಟಾಪ್ ನಲ್ಲಿ ವೆರಾಯಿಟಿ ಲಕ್ಷ್ಮೀಯರು ಮಾರ್ಕೆಟ್ ಗೆ ಬಂದಿದ್ದಾರಂತೆ. ಒಬ್ಬರಿಗೊಬ್ಬರು ಕಾಂಪಿಟೇಷನ್ ಕೊಡೋಕೆ ರೆಡಿಯಾಗಿದ್ದಾರಂತೆ. ಸೀರೆ ಹಾಗೂ ಅಲಂಕಾರದಲ್ಲಿ ಮಿಂಚುತ್ತಿರುವ ಲಕ್ಷ್ಮಿಯರು.. ಲೋಟಸ್ ನಲ್ಲಿ ಕುಳಿತು ಕಣ್ಮನ ಸೆಳೆಯುತ್ತಿರುವ  ಲಕ್ಷ್ಮಿಯರು.. ಅಬ್ಬಬ್ಬಾ ಅಷ್ಟ ಸೌಭಾಗ್ಯಗಳ ಒಡತಿಯ ಅಲಂಕಾರವನ್ನು ನೋಡೋದೇ ಚೆಂದ ಕಣ್ರೀ.. ಹೌದು ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆಯೇ ಸಾಲು ಸಾಲು ಹಬ್ಬಗಳ ಜೊತೆಗೆ ಹೆಣ್ಮಕ್ಕಳ ಅಚ್ಚುಮೆಚ್ಚಿನ ಹಬ್ಬಕ್ಕೂ ಎಲ್ಲ ತಯಾರಿಗಳು ಭರದಿಂದ ಸಾಗುತ್ತಿವೆ. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೇ 25 ರಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದಂದು ಜಗವ ಕಾಯೋ ಜಗ್ಮನಾತೆ ಲಕ್ಷ್ಮಿಯನ್ನು ಮನೆ ಮನೆಗಳಲ್ಲಿ ಪ್ರತಿಷ್ಟಾಪಿಸಿ, ಅಲಂಕಾರ ಮಾಡಿ ಪೂಜೆ ಮಾಡ್ತಾರೆ. ಅಷ್ಟ ಸೌಭಾಗ್ಯಗಳ ಒಡತಿಯ ವೆರಾಯಿಟಿ ಅಲಂಕಾರವನ್ನು ನೋಡೋದೇ ಬಲು ಚೆಂದ. ಇನ್ನು ಮಾರ್ಕೇಟ್ ಗೆ ರೆಡಿಮೆಡ್ ಲಕ್ಷ್ಮೀಯರು ಎಂಟ್ರಿ ಕೊಟ್ಟಿದ್ದಾರೆ. 

 ಬ್ಯುಸಿ ಸ್ಕೆಡ್ಯೂಲ್ ನಲ್ಲಿರೋ ಸಿಲಿಕಾನ್ ಸಿಟಿ ಮಂದಿಗೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ದೇವಿಯನ್ನು ಅಲಂಕಾರ ಮಾಡಲು ಸಮಯ ಸಾಕಾಗಲ್ಲ. ಹೀಗಾಗಿ ಬ್ಯುಸಿ ಮಹಿಳೆಯರಿಗೆಂದೇ ಮಾರ್ಕೆಟ್ ನಲ್ಲಿ ವಿವಿಧ ಬಗೆಯ ಬೆಂಗಳೂರು ಮಾರ್ಕೆಟ್ ಗೆ ರೆಡಿಮೆಡ್ ವರಮಹಾಲಕ್ಷ್ಮೀಯರು ಎಂಟ್ರಿ ಕೊಟ್ಟಿದ್ದಾರೆ. ಹಬ್ಬದಂದು ಮನೆ ಕೆಲಸ, ಅಡುಗೆ  ಹಾಗೂ ಮಕ್ಕಳ ತಯಾರಿ ನಡುವೆ ಬಿಡುವು ಸಿಗೋದಿಲ್ಲ. ಅದರಲ್ಲೂ ಸಿಹಿ ತಿಂಡಿಗಳ ತಯಾರಿಯಲ್ಲಿ ಹೆಚ್ಚು ಸಮಯ ಕೊಡಬಹುದಾಗಿದೆ. ಮನೆಗೆ ಬಂದ ಅತಿಥಿಗಳೊಂದಿಗೆ ಟೈಮ್ ಸ್ಪೇ೦ಡ್ ಮಾಡೋಕೆ ಸುಲಭವಾಗುತ್ತೆ. ಈ ರೆಡಿಮೆಡ್ ಲಕ್ಷ್ಮಿಯರಿಂದ ಹಾಗೂ ವೆರಾಯಿಟಿ ಡೆಕೋರೇಟ್ ಐಟಮ್ಸ್ ಸಿಗುವುದರಿಂದ ಸಮಯದ ಉಪಯೋಗವಾಗಲಿದೆ ಅಂತಾರೆ ಮಹಿಳೆಯರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಸಜ್ಜಾಗ್ತಿದೆ ರಾಜ್ಯದ 2ನೇ ಮಿಲ್ಕ್‌ಬ್ಯಾಂಕ್‌!