Select Your Language

Notifications

webdunia
webdunia
webdunia
webdunia

ಬಿಎಸ್ ಯಡಿಯೂರಪ್ಪ ನೇಣು ಹಾಕಿಕೊಳ್ಳಲಿ: ಎಂಬಿ ಪಾಟೀಲ್

ಬಿಎಸ್ ಯಡಿಯೂರಪ್ಪ
ವಿಜಯಪುರ: ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ನೀರಾವರಿ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ನೀರಾವರಿ ಸಚಿವರು ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಇಂತಹವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಬಿಎಸ್ ವೈ ಮೊನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ನೀರಾವರಿ ಸಚಿವರು ಈ ಅಕ್ರಮ ಟೆಂಡರ್ ನ್ನು ರದ್ದುಗೊಳಿಸಲಾಗಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. ಭ್ರಷ್ಟಾಚಾರವೆಸಗಿದ್ದರೆ ನನ್ನ ಮೇಲೆ ಎಸಿಬಿಗೆ ದೂರು ಕೊಡಲಿ, ಸಿಬಿಐ ತನಿಖೆಯಾಗಲಿ. ನನಗೆ ಭಯವಿಲ್ಲ. ಕಿಕ್ ಬ್ಯಾಕ್ ಸಾಬೀತುಪಡಿಸದಿದ್ದರೆ ಬಿಎಸ್ ವೈ ನೇಣು ಹಾಕಿಕೊಳ್ಳಲಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ರಾಜೀನಾಮೆ ಸಲ್ಲಿಸಿದ ಜೆಡಿಎಸ್ ರೆಬಲ್ ಶಾಸಕರು