Select Your Language

Notifications

webdunia
webdunia
webdunia
webdunia

18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ! ಇದರ ವಿಶೇಷತೆ?

18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ! ಇದರ ವಿಶೇಷತೆ?
ನವದೆಹಲಿ , ಗುರುವಾರ, 27 ಜನವರಿ 2022 (15:20 IST)
ಕ್ಯಾನ್ಬೆರಾ : ಆಕಾಶದಲ್ಲಿ ಇಲ್ಲಿಯವರೆಗೆ ಎಂದಿಗೂ ಕಾಣಿಸಿಕೊಳ್ಳದ ವಿಚಿತ್ರ ವಸ್ತುವೊಂದನ್ನು ಮಿಲ್ಕಿ ವೇ(ಕ್ಷೀರಪಥ) ಗ್ಯಾಲಕ್ಸಿಯಲ್ಲಿ  ಪತ್ತೆ ಹಚ್ಚಲಾಗಿದೆ.

18.18 ನಿಮಿಷಗಳಿಗೊಮ್ಮೆ ಸ್ಫೋಟಿಸುವ ಈ ಹೊಸ ವಸ್ತು ವಿಜ್ಞಾನ ಲೋಕಕ್ಕೆ ಹೊಸ ಸವಾಲಾಗಿದೆ.

ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ಮರ್ಚಿಸನ್ ವೈಡ್ಫೀಲ್ಡ್ ಅರೇ ಪ್ರಾಜೆಕ್ಟ್ ಅಡಿ ತಯಾರಾದ ದೂರದರ್ಶಕವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮೊದಲ ಬಾರಿಗೆ ಈ ವಿಚಿತ್ರ ವಸ್ತುವನ್ನು ಕಂಡುಹಿಡಿದಿದ್ದರು. ಈಗ ಪ್ರತಿ ಗಂಟೆಗೆ 3 ಬಾರಿ ದೊಡ್ಡ ಮಟ್ಟದ ಸ್ಫೋಟವನ್ನು ಬಿಡುಗಡೆ ಮಾಡುವ ವಸ್ತುವಿನ ಬಗ್ಗೆ ಖಗೋಳಶಾಸ್ತ್ರಜ್ಞರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಈ ವಿಚಿತ್ರ ವಸ್ತು ಭೂಮಿಯಿಂದ 4 ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಊಹಿಸಲಾಗಿದೆ. ಅತ್ಯಂತ ಪ್ರಕಾಶಮಾನವಾಗಿರುವ ವಸ್ತು ಅತ್ಯಂತ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಇದರ ಬಗ್ಗೆ ಇನ್ನೂ ಹಲವು ರಹಸ್ಯವನ್ನು ಬಯಲು ಮಾಡುವುದು ಬಾಕಿ ಇದೆ ಎಂದು ಖಗೋಳಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಪೆಟ್ರೋಲ್ ಬೆಲೆ ದುಬಾರಿ!?