Webdunia - Bharat's app for daily news and videos

Install App

ಕರುಣಾನಿಧಿ ಆರೋಗ್ಯದಲ್ಲಿ ಅಲ್ಪ ಚೇತರಿಕೆ

Webdunia
ಮಂಗಳವಾರ, 31 ಜುಲೈ 2018 (09:04 IST)
ಚೆನ್ನೈ: ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜ್ವರ, ಮೂತ್ರ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ರಕ್ತದೊತ್ತಡ ಏರುಪೇರಾದ ಹಿನ್ನಲೆಯಲ್ಲಿ ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಭಾನುವಾರ ರಾತ್ರಿ ಅವರ ಆರೋಗ್ಯ ತೀರಾ ಗಂಭೀರ ಸ್ಥಿತಿಗೆ ತಲುಪಿತ್ತು.

ಈ ವೇಳೆ ಆಸ್ಪತ್ರೆಯ ಸುತ್ತ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಇಂದೂ ಕೂಡಾ ಅಭಿಮಾನಿಗಳು ಆಸ್ಪತ್ರೆಯ ಹೊರಗೆ ತಮ್ಮ ನೆಚ್ಚಿನ ನಾಯಕನ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಲು ಗುಂಪು ಸೇರಿದ್ದಾರೆ.

ಕರುಣಾನಿಧಿ ಕುಟುಂಬ ವರ್ಗ ಆಸ್ಪತ್ರೆಯಲ್ಲೇ ಇದೆ. ಇಂದು ಕರುಣಾನಿಧಿಯವರನ್ನು ಭೇಟಿ ಮಾಡಿರುವ ಡಿಎಂಕೆ ನಾಯಕ ಎ ರಾಜಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಈಗಲೂ ಐಸಿಯುವಿನಲ್ಲೇ ತಜ್ಞ ವೈದ್ಯರ ತಂಡ ಕರುಣಾನಿಧಿಗೆ ಚಿಕಿತ್ಸೆ ನೀಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫೋನ್ ನಲ್ಲಿ ಬ್ಯುಸಿ… ಗಂಡನ ಬೈಕ್ ಬಿಟ್ಟು ಬೇರೆ ಯುವಕನ ಬೈಕ್ ಏರಿದ ಮಹಿಳೆ: ಮುಂದೇನಾಯ್ತು Funny video

ಕಾಸರಗೋಡಿನಲ್ಲಿ ಟ್ಯಾಂಕ್ಗಾಗಿ ಗುಂಡಿ ಅಗೆಯುತ್ತಿದ್ದಾಗ ಮನೆ ಅಡಿಯಲ್ಲಿ ಬೃಹತ್ ಸುರಂಗ ಪತ್ತೆ Video

ಭಿಕ್ಷೆ ಕೊಡದಿದ್ದರೆ ಬೇಡ ಹಿಂಸೆ ಮಾಡೋದು ಸರೀನಾ.. ಬಡ ಬಾಲಕನ ಬಳಿ ಕಾರಿನ ಚಾಲಕನ ದರ್ಪ: ಕರುಣಾಜನಕ ವಿಡಿಯೋ

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಗ್ಯಾರಂಟಿ: ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ

ಬಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು: ಬಿಜೆಪಿ, ಜೆಡಿಎಸ್ ಗದ್ದಲಕ್ಕೆ ಇಂದೂ ಬಲಿ ಸಾಧ್ಯತೆ

ಮುಂದಿನ ಸುದ್ದಿ
Show comments