Publish Date: Sun, 17 Apr 2022 (15:30 IST)
Updated Date: Sun, 17 Apr 2022 (16:32 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದು,
ಶನಿವಾರ 461 ಪ್ರಕರಣಗಳು ಪತ್ತೆಯಾಗಿ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ತನ್ಮೂಲಕ ಪಾಸಿಟಿವಿಟಿ ದರ ಶೇ.5.33ಕ್ಕೆ ಏರಿಕೆಯಾಗಿದೆ.
ಶುಕ್ರವಾರ 366, ಗುರುವಾರ 325 ಪ್ರಕರಣಗಳು ಪತ್ತೆಯಾಗಿದ್ದವು. ಇದರೊಂದಿಗೆ ದೆಹಲಿಯಲ್ಲಿ ಈವರೆಗೆ ಪತ್ತೆಯಾದ ಒಟ್ಟು ಕೋವಿಡ್ ಕೇಸುಗಳ ಸಂಖ್ಯೆ 18.68 ಲಕ್ಷಕ್ಕೆ ಏರಿಕೆಯಾಗಿದೆ.
ಸಾವಿಗೀಡಾದವರ ಸಂಖ್ಯೆ 26,160ಕ್ಕೆ ತಲುಪಿದೆ. ಶುಕ್ರವಾರ ಪಾಸಿಟಿವಿಟಿ ದರ ಶೇ.3.95ರಷ್ಟಿತ್ತು.