Publish Date: Fri, 08 Apr 2022 (10:06 IST)
Updated Date: Fri, 08 Apr 2022 (10:09 IST)
ಬೀಜಿಂಗ್: ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೀನಾದಲ್ಲಿ ಮತ್ತೆ ಕಠಿಣ ನಿಯಮಾವಳಿಗಳನ್ನು ಹೊರತರಲಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಚೀನಾದಲ್ಲಿ ಸಾರ್ವಜನಿಕವಾಗಿ ಕೊರೋನಾ ನಿಯಮ ಘೋಷಣೆ ಮಾಡುತ್ತಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಇಂದಿನಿಂದ ದಂಪತಿ ಒಟ್ಟಿಗೆ ಮಲಗುವಂತಿಲ್ಲ, ತಬ್ಬಿಕೊಳ್ಳುವುದು, ಕಿಸ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸಾರ್ವಜನಿಕವಾಗಿ ಅನೌನ್ಸ್ ಮಾಡುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಕೊರೋನಾ ಹರಡುವುದನ್ನು ತಡೆಯಲು ಚೀನಾದಲ್ಲಿ ಇಂತಹ ಕಠಿಣ ನಿಯಮ ಹೊರತರಲಾಗಿದೆ.