ಬೆಂಗಳೂರು : ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದ ನಂತರ ಮುಂದೆ ಏನು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಪ್ರಸ್ತುತ ಈ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ.
ಈ ಲ್ಯಾಂಡಿಂಗ್ ನಂತರವೇ ನಿಜವಾದ ಕೆಲಸಗಳು ಪ್ರಾರಂಭವಾಗಿವೆ. ಸದ್ಯಕ್ಕೆ ವಿಜ್ಞಾನಿಗಳು ಒಂದು ಚಂದ್ರನ ದಿನಕ್ಕೆ ಅಂದರೆ 14 ದಿನಗಳ ರೋವರ್ ಕಾರ್ಯಾಚರಣೆಗಳ ತಿಳಿಯುವ ಪ್ಲಾನ್ ಮಾಡಿದ್ದಾರೆ.
ವಿಕ್ರಮ್ ಲ್ಯಾಂಡರ್ನಲ್ಲಿ ಡೇಟಾವನ್ನು ಒದಗಿಸುವ ಐದು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿದ್ದು, ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್ಗಾಗಿ ರಾಂಪ್ ಅನ್ನು ರಚಿಸುತ್ತದೆ. ಆರು ಚಕ್ರಗಳ ಪ್ರಗ್ಯಾನ್ ರೋವರ್ನಲ್ಲಿ ಎರಡು ಚಕ್ರಗಳಲ್ಲಿ ಒಂದರಲ್ಲಿ ಅಶೋಕ ಚಕ್ರದ ಚಿಹ್ನೆಯಿದ್ದು, ಮತ್ತೊಂದರಲ್ಲಿ ಇಸ್ರೋ ಲಾಂಛನವಿದ್ದು, ಇವುಗಳು ಚಂದ್ರನ ಮೇಲ್ಮೈ ಮೇಲೆ ಭಾರತದ ಮುದ್ರೆಯನ್ನು ಅಚ್ಚು ಒತ್ತುತ್ತವೆ. ಈ ಮುದ್ರೆ ಸಾವಿರಾರು ವರ್ಷಗಳ ಕಾಲ ಹಾಗೆ ಇರಲಿದೆ. ಏಕೆಂದರೆ ಚಂದ್ರನ ಮೇಲೆ ಗಾಳಿ, ನೀರು ಇಲ್ಲ ಅಂತಾ ವಿಜ್ಞಾನಿಗಳು ಹೇಳುತ್ತಾರೆ.
ಈ ರೋವರ್ ಚಂದ್ರನ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ರೋವರ್ನ ವೈಜ್ಞಾನಿಕ ಪೇಲೋಡ್ಗಳು ಚಂದ್ರನ ಅಂಶಗಳು, ವಾತಾವರಣ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡುತ್ತದೆ. ಇದು ಚಂದ್ರಯಾನದ ವಸ್ತು, ಸ್ಯಾಂಪಲ್ ಗಳನ್ನು ನೀಡಲಿದೆ. ಚಂದ್ರನ ಮೇಲಿನ ಕಂಪನಗಳು,ಚಂದ್ರನ ಒಳರಚನೆ ಬಗ್ಗೆ ಸುಳಿವು ತಿಳಿಯುತ್ತದೆ.