Select Your Language

Notifications

webdunia
webdunia
webdunia
webdunia

ಹೂ, ಹಣ್ಣಿನ ದರ ಭಾರೀ ಏರಿಕೆ!

ಹೂ, ಹಣ್ಣಿನ ದರ ಭಾರೀ ಏರಿಕೆ!
ಬೆಂಗಳೂರು , ಗುರುವಾರ, 24 ಆಗಸ್ಟ್ 2023 (07:23 IST)
ಬೆಂಗಳೂರು : ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಣ್ಣು ಹಾಗೂ ಹೂವಿನ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಇದರ ನಡುವೆಯೇ ಗ್ರಾಹಕರು ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಖರೀದಿಯನ್ನು ಮುಂದುವರೆಸಿದ್ದಾರೆ.

ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂ ಹಾಗೂ ಹಣ್ಣುಗಳ ದರದಲ್ಲಿ ಏರಿಕೆಯಾಗಿರುವುದು ಹಬ್ಬದ ಸಂಭ್ರಮದಲ್ಲಿದ್ದವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಬೆಲೆ ದುಬಾರಿಯಾದರೂ ಗ್ರಾಹಕರು ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ. ಶುಕ್ರವಾರ ನಡೆಯಲಿರುವ ಹಬ್ಬಕ್ಕೆ ಜನ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ. 

ಹೂವಿನ ದರ ಎಷ್ಟಿದೆ?
ಕನಕಾಂಬರ ಕೆಜಿಗೆ 1,200 – 1,500
ಮಲ್ಲಿಗೆ ಕೆಜಿಗೆ 600 – 800 ರೂ.
ಗುಲಾಬಿ 150 – 200 ರೂ.
ಚಿಕ್ಕ ಹೂವಿನ ಹಾರ 150 – 200 ರೂ.
ದೊಡ್ಡ ಹೂವಿನ ಹಾರ 300 – 500 ರೂ.
ಸೇವಂತಿಗೆ 250 – 300 ರೂ.
ತಾವರೆ ಹೂ ಜೋಡಿ 50 – 100 ರೂ.

ಹಣ್ಣುಗಳ ದರ ಎಷ್ಟಿದೆ?

ಏಲಕ್ಕಿ ಬಾಳೆ 120 – 140 ರೂ.
ಸೀಬೆ 120 ರೂ.
ಸೇಬು 200 – 300 ರೂ.
ಕಿತ್ತಲೆ 150 – 200 ರೂ.
ದ್ರಾಕ್ಷಿ 180 – 200 ರೂ.
ಪೈನಾಪಲ್ 80/1ಕ್ಕೆ ರೂ.
ದಾಳಿಂಬೆ-150-200 ರೂ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಬರಲಿದ್ದಾರೆ ಮೋದಿ : ಇಸ್ರೋ ಕೇಂದ್ರ ಕಚೇರಿಗೆ ಭೇಟಿ