Select Your Language

Notifications

webdunia
webdunia
webdunia
webdunia

ಕಾಂಜಂಕ್ಟಿವಿಟಿಸ್ ಪ್ರಕರಣ ಹೆಚ್ಚಳ! ಪೋಷಕರಲ್ಲಿ ಹೆಚ್ಚಿದ ಆತಂಕ

ಕಾಂಜಂಕ್ಟಿವಿಟಿಸ್ ಪ್ರಕರಣ ಹೆಚ್ಚಳ! ಪೋಷಕರಲ್ಲಿ ಹೆಚ್ಚಿದ ಆತಂಕ
ಬೆಂಗಳೂರು , ಶನಿವಾರ, 29 ಜುಲೈ 2023 (13:11 IST)
ಬೆಂಗಳೂರು : ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ ಜನರಲ್ಲಿ ಆತಂಕ ಮೂಡಿಸಿದ್ದು, ಕಳೆದ ಮೂರ್ನಾಲ್ಕು ವಾರಗಳಲ್ಲಿ ಬೆಂಗಳೂರಿನಲ್ಲಿ ಪ್ರಕರಣ ಏರಿಕೆಯಾಗುತ್ತಿದೆ.
 
ಕಳೆದ ಮೂರ್ನಾಲ್ಕು ವರ್ಷಗಳ ನಂತರ ಕಣ್ಣಿಗೆ ಬೇನೆ ಕಾಟ ಶುರುವಾಗಿದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದ್ದು, ಪೋಷಕರಲ್ಲಿ ತಳಮಳ ಶುರುವಾಗಿದೆ. ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತಿದೆ.

ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಆನಂದ್ ಬಾಲಸುಬ್ರಮಣ್ಯಂ ಮಾತನಾಡಿ, ಕಳೆದ ಮೂರು ವಾರಗಳಲ್ಲಿ ರೋಗಿಗಳ ಸಂಖ್ಯೆ ಶೇ.50ರಷ್ಟು ಹೆಚ್ಚಿದೆ, ಆದರೆ ಒಂದು ವಾರದಲ್ಲಿ ಶೇ.90ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೂಕುಸಿತ ವಲಯ ಗುರುತು : ಮಳೆಗೆ ಮತ್ತೊಮ್ಮೆ ಕಂಟಕ?