ಮಡಿಕೇರಿ : ಜುಲೈ ತಿಂಗಳ ಕಂಟಕ ಮುಗಿಯಿತು. ಮಳೆಗಾಲದಿಂದ ಸ್ವಲ್ಪ ಸೇಫ್ ಎಂದುಕೊಂಡಿದ್ದ ಕೊಡಗಿನ ಜನರಿಗೆ ಇದೀಗ ಜಿಲ್ಲಾಡಳಿತ ಶಾಕ್ ನೀಡಿದೆ.
ಮುಂಬರುವ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಹಾಮಳೆಗೆ ಜಿಲ್ಲೆಯ 48 ಜಾಗಗಳು ಭೂಕುಸಿತ ವಲಯ ಎಂದು ಗುರುತು ಮಾಡಿದೆ. ಹೀಗಾಗಿ ಇದೀಗ ಗುಡ್ಡಗಾಡು ಜನರಿಗೆ 2018-19ರ ಕಹಿ ದಿನಗಳು ಮತ್ತೆ ಮರುಕಳಿಸುತ್ತಾ ಎನ್ನೋ ಆತಂಕ ಎದುರಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಬಂದರೆ ಸಾಕು, ನಗರ ಪ್ರದೇಶದ ಜನರಿಂದ ಗುಡ್ಡಗಾಡು ನದಿ ಪಾತ್ರದ ಜನರಿಗೆ ಒಂದಲ್ಲಾ ಒಂದು ಆತಂಕ ಎದುರಾಗಿ ಬಿಡುತ್ತದೆ. ಆದರೂ ಇದೀಗ ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳ ಮಳೆಯಿಂದ ಪಾರಾಗಿದ್ದ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಮುಂಬರುವ ಆಗಸ್ಟ್ ತಿಂಗಳ ಮಳೆಗೆ ಜಿಲ್ಲೆಯ 48 ಕಡೆ ಭೂಕುಸಿತ ಹಾಗೂ 44 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ.