Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ

ರಾಹುಲ್ ಗಾಂಧಿಗೆ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ
ನವದೆಹಲಿ , ಶನಿವಾರ, 29 ಜುಲೈ 2023 (12:44 IST)
ನವದೆಹಲಿ : ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ, ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಕೇರಳದಲ್ಲಿ ಮೊಣಕಾಲು ಸಂಬಂಧಿತ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ಅವರು ಡಿಸ್ಚಾರ್ಜ್ ಆಗುವ ನಿರೀಕ್ಷೆಗಳಿವೆ ಎಂದು ಮೂಲಗಳು ಹೇಳಿವೆ.

ಮೊಣಕಾಲು ಸಂಬಂಧಿ ಸಮಸ್ಯೆಗಾಗಿ ರಾಹುಲ್ ಗಾಂಧಿ ಜುಲೈ 21 ರಂದು ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಶಾಸಕ ಎಪಿ ಅನಿಲ್ ಕುಮಾರ್ ರಾಹುಲ್ ಗಾಂಧಿ ಜೊತೆಗಿದ್ದಾರೆ.

ಆಸ್ಪತ್ರೆಯಲ್ಲಿದ್ದಾಗ ಅವರು ಮಲಯಾಳಂನ ಪ್ರಸಿದ್ಧ ಬರಹಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಅವರಿಗೆ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆ ಬಳಿ ಇರುವ ಶ್ರೀ ವಿಶ್ವಂಭರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಪಿಎಸ್ವಿ ನಾಟ್ಯ ಸಂಘವು ಪ್ರದರ್ಶಿಸಿದ ‘ದಕ್ಷಯಜ್ಞ’ ಕಥೆಯನ್ನು ಆಧರಿಸಿದ ಕಥಕ್ಕಳಿ ಪ್ರದರ್ಶನ ವೀಕ್ಷಿಸಿದರು.  

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋನ್ ಮೂಲಕ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ : ಪಾಕ್ ಪ್ರಧಾನಿ ಆಪ್ತ