Publish Date: Fri, 28 Jul 2023 (14:37 IST)
Updated Date: Fri, 28 Jul 2023 (15:59 IST)
ಮಂಗಳೂರಿನ ಸೌಜನ್ಯ ಅತ್ಯಾಚಾರ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ.ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ವ್ಯಾಪಾಕ ಆಕ್ರೋಶ ಹೊರಹಾಕಲಾಗಿದೆ.2012,ಅಕ್ಟೋಬರ್ 9 ರಂದು ನಡೆದಿದ್ದ ಸೌಜನ್ಯ ಹತ್ಯೆ ನಡೆದಿದ್ದು,ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ 11 ವರ್ಷಗಳ ತನಿಖೆ ಬಳಿಕ ಆರೋಪಿ ಸಂತೋಷ್ ರಾವ್ ನಿರ್ದೋಷಿ ಅಂತಾ ತೀರ್ಪು ನೀಡಿದೆ.ಬಳಿಕ ವಿಶೇಷ ತನಿಖೆಗೆ ನ್ಯಾಯಾಲಯ ಸೂಚಿಸಿದೆ.ಇದೀಗ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳು ಆಗ್ರಹಿಸಿದೆ.
೨೦ ಕ್ಕೂ ಹೆಚ್ಚು ಸಂಘಟನೆಗಳಿಂದ SIT ತನಿಖೆಗೆ ಆಗ್ರಹಿ ಪ್ರತಿಭಟನೆ ನಡೆಸಲಾಗ್ತಿದೆ.2012,ಅಕ್ಟೋಬರ್ 9 ರಂದು ನಡೆದಿದ್ದ ಸೌಜನ್ಯ ಹತ್ಯೆ ಖಂಡಿಸಿ ಧರಣಿ ನಡೆಸಲಾಗ್ತಿದ್ದು,ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಅಕ್ಕಯಿ ಪದ್ಮಶಾಲಿ ಭಾಗಿಯಾಗಿದ್ದಾರೆ.