Select Your Language

Notifications

webdunia
webdunia
webdunia
webdunia

ಆಡಿಯೋ ಟ್ವೀಟ್ ಮಾಡೋದು ಹೀಗೆ...?

ಆಡಿಯೋ ಟ್ವೀಟ್ ಮಾಡೋದು ಹೀಗೆ...?
ನವದೆಹಲಿ , ಬುಧವಾರ, 28 ಜುಲೈ 2021 (14:55 IST)
Twitter: ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಪಾತ್ರವಹಿಸಿದ ಟ್ವಿಟ್ಟರ್ ಫೇಸ್ಬುಕ್, ಇನ್ಸ್ಟಾಗ್ರಾಮ್ಗಿಂತ ಭಿನ್ನ. ಅಕ್ಷರಗಳ ಮಿತಿಗಳನ್ನು ಹೊಂದಿರುವ ಸಂದೇಶ ರವಾನಿಸುವ ಆನ್ಲೈನ್ ಸೇವೆಯಾದ ಇದರ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ಬಳಕೆದಾರ ಸ್ನೇಹಿಯಾಗಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್ ಈಗಾಗಲೇ ಹಲವು ನಕಲಿ ಖಾತೆಗಳನ್ನು ತೆಗೆದುಹಾಕಿ ಹೊಸ ಹೊಸ ನಿಯಮಗಳನ್ನು ಅಳವಡಿಸುವ ಮೂಲಕ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಹಿಂದಿಕ್ಕಲು ಪ್ರಯತ್ನ ನಡೆಸುತ್ತಿದೆ.ಹಾಗಾಗಿ ಟ್ವಿಟ್ಟರ್ ಇದೀಗ ಮತ್ತೊಂದು ಹೊಸ ಲಕ್ಷಣವನ್ನು ಅಳವಡಿಸಿಕೊಳ್ಳುತ್ತಿದೆ.ಸ್ವಯಂ-ರಚಿತ ಲೈವ್ ಟ್ರಾನ್ಸ್ಸಿಪ್ಷನ್ಗಳನ್ನು ಧ್ವನಿ ಟ್ವೀಟ್ಗಳೊಂದಿಗೆ ನೀಡುವ ಸಾಮರ್ಥ್ಯವನ್ನು ಟ್ವಿಟ್ಟರ್ ಇತ್ತೀಚೆಗೆ ಸೇರಿಸಿದೆ. ಈ ಹಿಂದೆ ಟ್ವಿಟ್ಟರ್ನಲ್ಲಿ ಸಂದೇಶ ಕಳುಹಿಸಲು ನಿಗದಿತ ಅಕ್ಷರಗಳೊಳಗೆ ಟೈಪ್ ಮಾಡಿ ಟ್ವೀಟ್ ಮಾಡಬೇಕಾಗಿತ್ತು. ಆದರೆ ಇನ್ನು ಮಂದೆ ಟ್ವೀಟ್ ಮಾಡುವುದು ಮತ್ತಷ್ಟು ಸುಲಭ. ನಿಮ್ಮ ಧ್ವನಿಯ ಮೂಲಕ ಟ್ವೀಟ್ ಕೆಲಸ ಮತ್ತಷ್ಟು ಸುಲಭ ಎನ್ನುತ್ತದೆ ಕಂಪೆನಿ. ಅಂದರೆ ಟ್ವಿಟ್ಟರ್ ಈಗಾಗಲೇ ಕಳೆದ ವರ್ಷ ಕೈ ಬರಹದ ಸಂದೇಶದ ಬದಲು ಧ್ವನಿ ಸಂದೇಶ ಮಾದರಿಯನ್ನು ಅಳವಡಿಸಿಕೊಂಡಿತ್ತು. ಈ ವೈಶಿಷ್ಟ್ಯತೆ ಪ್ರಾರಂಭದಿಂದ ಐಒಎಸ್ ಬಳಕೆದಾರರರಿಗೆ ಮಾತ್ರ ಲಭ್ಯವಿದ್ಹೊದು, ಆ್ಯಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಸದ್ಯ ಲಭ್ಯವಿಲ್ಲ.
ಧ್ವನಿ ಸಂದೇಶ ಲಕ್ಷಣದ ಜೊತೆಗೆ ಸ್ವಯಂ-ರಚಿತ ಲೈವ್ ಟ್ರಾನ್ಸ್ಸಿಪ್ಷನ್ಗಳನ್ನು ಧ್ವನಿ ಟ್ವೀಟ್ಗಳೊಂದಿಗೆ ನೀಡುವ ಸಾಮರ್ಥ್ಯವನ್ನು ಟ್ವಿಟ್ಟರ್ ಸೇರಿಸಿದೆ. ಈಗ, ಆ್ಯಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಧ್ವನಿ ಟ್ವೀಟ್ಗಳನ್ನು ಪೋಸ್ಟ್ ಮಾಡುವ ಸಾಮರ್ಥ್ಯವಿಲ್ಲದಿದ್ದರೂ, ಐಒಎಸ್ ಬಳಕೆದಾರರು ಪೋಸ್ಟ್ ಮಾಡಿದ ಧ್ವನಿ ಟ್ವೀಟ್ಗಳನ್ನು ಕೇಳಬಹುದು.
ಆ್ಯಪಲ್ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಕೇವಲ 2 ನಿಮಿಷ 20 ಸೆಕೆಂಡುಗಳ ಧ್ವನಿ ಟ್ವೀಟ್ಗಳನ್ನು ಮಾತ್ರ ರೆಕಾರ್ಡ್ ಮಾಡಬಹುದು ಮತ್ತು ಬಳಕೆಯು 2 ನಿಮಿಷ 20 ಸೆಕೆಂಡ್ ಮಿತಿಯನ್ನು ಮೀರಿದರೆ ಸಂದೇಶವನ್ನು ಸ್ವಯಂಚಾಲಿತವಾಗಿ ಥ್ರೆಡ್ ಎಂಬ ಆಯ್ಕೆಯಲ್ಲಿ ಇಡಲಾಗುತ್ತದೆ.
ಆದ್ದರಿಂದ, ನೀವು ಐಫೋನ್ ಮತ್ತು ಐಪ್ಯಾಡ್ನಲ್ಲಿ ಟ್ವಿಟ್ಟರ್ ಬಳಸುತ್ತಿದ್ದರೆ ಮತ್ತು ಈ ವೈಶಿಷ್ಟ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದರೆ, ಇಲ್ಲಿ ನೋಡಿ..
ಹಂತ 1:ಮೊದಲು ಐಫೋನ್ ಅಥವಾ ಐಪ್ಯಾಡ್ನಲ್ಲಿ ನಿಮ್ಮ ಟ್ವಿಟ್ಟರ್ ಖಾತೆ ಓಪನ್ ಮಾಡಬೇಕು
ಹಂತ 2:ನೀವು ಕಳುಹಿಸುವ ಸಂದೇಶವನ್ನು ತಯಾರು ಮಾಡಿಕೊಳ್ಳಬೇಕು
ಹಂತ 3:ಧ್ವನಿ ಟ್ವೀಟ್ಗಳನ್ನು ಸೂಚಿಸುವ ‘wavelengths’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದಾಗ, ನಾವು ಕಳುಹಿಸುವ ಸಂದೇಶವನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ.
ಹಂತ 4:ಮುಗಿದ ನಂತರ ಡನ್ ಎಂಬ ಆಯ್ಕೆ ಕ್ಲಿಕ್ ಮಾಡಬೇಕು
ಬಳಕೆದಾರರು ಫಾಲೋ-ಅಪ್ ಟ್ವೀಟ್ಗಳನ್ನು ಪಠ್ಯಗಳ ಮೂಲಕ ತಮ್ಮ ಧ್ವನಿ ಟ್ವೀಟ್ಗಳಿಗೆ ಸೇರಿಸಬಹುದು. ಆದರೆ, ಬಳಕೆದಾರರು ತಮ್ಮ ಧ್ವನಿ ಬಳಸಿಕೊಂಡು ಟ್ವೀಟ್ಗಳಿಗೆ ಪ್ರತ್ಯುತ್ತರಗಳನ್ನು ಪೋಸ್ಟ್ ಮಾಡಲು ಮತ್ತು ಟ್ವೀಟ್ಗಳನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮೊದಲಿನಂತೆಯೇ ಟ್ವೀಟ್ ಮಾಡಬೇಕಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೇಫ್ ಗೇಮ್ ಆಡುವ ಬೊಮ್ಮಾಯಿ ಈಗ ನಂಬರ್ 3!?