Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಎಷ್ಟು?

ಭಾರತದಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಎಷ್ಟು?
ನವದೆಹಲಿ , ಶುಕ್ರವಾರ, 6 ಮೇ 2022 (12:35 IST)
ನವದೆಹಲಿ : ಭಾರತದಲ್ಲಿ ಕೋವಿಡ್ನಿಂದಾಗಿ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ವರದಿ ಮಾಡಿದೆ.

ಕೋವಿಡ್ನಿಂದಾಗಿ ಮೃತಪಟ್ಟವರ ಅಂಕಿ-ಅಂಶದ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ನಡೆಯುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಈ ವರದಿಯು ಕೇಂದ್ರ ಸರ್ಕಾರದ ಅಂಕಿ-ಅಂಶಕ್ಕಿಂತಲೂ 10 ಪಟ್ಟು ಹೆಚ್ಚು ಮರಣ ಪ್ರಕರಣಗಳು ದಾಖಲಿಸಲಾಗಿದೆ. 

ಕೋವಿಡ್ ಸಾವುಗಳಿಗೆ ಸಂಬಂಧಿಸಿದ ಡಬ್ಲ್ಯೂಎಚ್ಒ ವರದಿಯನ್ನು ಕೇಂದ್ರ ಸರ್ಕಾರ ಆಕ್ಷೇಪಿಸಿದೆ. ಸಾವಿನ ಪ್ರಮಾಣ ಅಂದಾಜಿಸುವ ಡಬ್ಲ್ಯೂಎಚ್ಒ ಮಾದರಿಯನ್ನು ಭಾರತ ನಿರಂತರವಾಗಿ ಆಕ್ಷೇಪಿಸುತ್ತಿದ್ದು, ಈ ನಡುವೆಯೂ ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಮರಣ ಪ್ರಮಾಣವನ್ನು ಅಂದಾಜಿಸಲು ಡಬ್ಲ್ಯೂಎಚ್ಒ ಅನುಸರಿಸಿರುವ ಮಾದರಿ ಹಾಗೂ ಅಂಕಿ-ಅಂಶಗಳ ಸಂಗ್ರಹ ಕ್ರಮವು ಪ್ರಶ್ನಾರ್ಹವಾಗಿದೆ.

ಅಲ್ಲದೆ, ಸಾವಿಗಳಿಗೆ ಸಂಬಂಧಿಸಿದಂತೆ ನಾಗರಿಕ ನೋಂದಣಿ ವ್ಯವಸ್ಥೆಯಡಿ ಅಧಿಕೃತ, ವಿಶ್ವಾಸನೀಯ ಅಂಕಿ ಅಂಶಗಳು ಲಭ್ಯವಿವೆ. ಹೀಗಾಗಿ, ಹೆಚ್ಚುವರಿ ಸಾವುಗಳನ್ನು ಬಿಂಬಿಸುವ ಮಾದರಿಯನ್ನು ಅನುಸರಿಸಬಾರದು ಎಂದು ವಾದಿಸಿದೆ.

ಜನವರಿ 2020ರಿಂದ ಡಿಸೆಂಬರ್ 2021ರ ವರೆಗೂ ಭಾರತದಾದ್ಯಂತ ಕೋವಿಡ್ ಕಾರಣಗಳಿಂದ ಸಾವಿಗೀಡಾದವರ ಸಂಖ್ಯೆ 47,40,894 ಮುಟ್ಟಿತ್ತು. ಆರೋಗ್ಯ ಇಲಾಖೆಯ ದಾಖಲೆಯ ಪ್ರಕಾರ 2021ರ ಅಂತ್ಯಕ್ಕೆ ಸುಮಾರು 4,81,000 ಪ್ರಕರಣ ದಾಖಲಾಗಿತ್ತು. ಪ್ರಸ್ತುತ ದೇಶದಲ್ಲಿ ಕೋವಿಡ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,000 ದಾಟಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ!