Select Your Language

Notifications

webdunia
webdunia
webdunia
webdunia

ಕೊರೊನಾ ಗಾಳಿಯಲ್ಲಿ ಹರಡುವುದು ನಿಜ: ದೃಢಪಡಿಸಿದ ಸಮೀಕ್ಷೆ

ಕೊರೊನಾ ಗಾಳಿಯಲ್ಲಿ ಹರಡುವುದು ನಿಜ: ದೃಢಪಡಿಸಿದ ಸಮೀಕ್ಷೆ
bengaluru , ಬುಧವಾರ, 4 ಮೇ 2022 (14:43 IST)
ಕೊರೊನಾ ವೈರಸ್‌ ಸೋಂಕು ಗಾಳಿಯಲ್ಲಿ ಹರಡುವುದು ನಿಜ ಎಂದು ಸಮೀಕ್ಷೆಯೊಂದು ದೃಢಪಡಿಸಿದ್ದು, ಮಾಸ್ಕ್‌ ಹೆಚ್ಚಾಗಿ ಧರಿಸುವ ದೇಶಗಳಲ್ಲಿ ಸೋಂಕು ಪ್ರಮಾಣ ಕಡಿಮೆ ಆಗಿರುವುದನ್ನು ಉಲ್ಲೇಖಿಸಿದೆ.
ಕೊರೊನಾ ವೈರಸ್‌ ಗಾಳಿಯಲ್ಲಿ ಹರಡುತ್ತದೆ ಎಂಬ ಬಗ್ಗೆ ಸಾಕಷ್ಟು ಸಮೀಕ್ಷೆಗಳು ಹೇಳಿವೆ. ಆದರೆ ಅದು ನಿರ್ದಿಷ್ಟವಾಗಿ ಹರಡುತ್ತದೆ ಎಷ್ಟು ದೂರ ಹರಡುತ್ತದೆ ಎಂಬ ಸ್ಪಷ್ಟತೆ ಇರಲಿಲ್ಲ. ಆದರೆ ಇದೀಗ ಗಾಳಿಯಲ್ಲಿ ಕೊರೊನಾ ವೈರಸ್‌ ಅಂಶಗಳು ಹರಡುತ್ತದೆ ಎಂಬುದರನ್ನು ದೃಢಪಡಿಸಿದೆ.
ಹೈದರಾಬಾದ್‌ ನ ಸಿಎಸ್‌ ಐಆರ್-ಸಿಸಿಎಂಬಿ ಮತ್ತು ಚಂಡೀಗಢದ ಸಿಎಸ್‌ ಐಆರ್-ಐಎಂಟೆಕ್‌ ಸಂಸ್ಥೆಗಳು ಜಂಟಿಯಾಗಿ ಮೊಹಾಲಿ ಮತ್ತು ಹೈದರಾಬಾದ್‌ ಆಸ್ಪತ್ರೆಗಳ ರೋಗಿಗಳನ್ನು ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸಿದೆ.
ರೋಗಿಗಳು ಇದ್ದ ಜಾಗದಲ್ಲಿನ ಗಾಳಿಯನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದಾಗ ಕೊರೊನಾ ವೈರಸ್‌ ಅಂಶಗಳು ಪತ್ತೆಯಾಗಿವೆ.  ರೋಗಿ ಇದ್ದ ಆಸ್ಪತ್ರೆಯ ಕೊಠಡಿಯನ್ನು ಮುಚ್ಚಿಸಿ ಸೋಂಕು ಸಂಗ್ರಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್ ?