Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಮೊದಲ ಒಮಿಕ್ರೋನ್ XE ಪತ್ತೆ, ಹೈ ಅಲರ್ಟ್!

ಭಾರತದಲ್ಲಿ ಮೊದಲ ಒಮಿಕ್ರೋನ್ XE ಪತ್ತೆ, ಹೈ ಅಲರ್ಟ್!
ನವದೆಹಲಿ , ಬುಧವಾರ, 4 ಮೇ 2022 (10:23 IST)
ನವದೆಹಲಿ : ದೇಶದಲ್ಲಿ ಕೋವಿಡ್ ಸೋಂಕು ಏರಿಕೆಯಾಗುತ್ತಿರುವುದರ ನಡುವೆಯೇ ಆತಂಕಕಾರಿ ಸುದ್ದಿ ಹೊರಬಿದ್ದಿದ್ದು,

ಒಮಿಕ್ರೋನ್ನ ರೂಪಾಂತರಿ ಉಪತಳಿ ಎಕ್ಸ್ಇ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ. ಕೊರೋನಾ ವೈರಸ್ನ ರೂಪಾಂತರದ ಮೇಲೆ ನಿಗಾ ವಹಿಸುವ ಇನ್ಸಾಕಾಗ್ ಇದನ್ನು ಮಂಗಳವಾರ ಖಚಿತಪಡಿಸಿದೆ.

ಈ ಹಿಂದೆಯೇ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಎಕ್ಸ್ಇ ಉಪತಳಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಇದೀಗ ಮೊದಲ ಬಾರಿ ಎಕ್ಸ್ಇ ಸೋಂಕು ಪತ್ತೆಯಾಗಿರುವುದನ್ನು ಇನ್ಸಾಕಾಗ್ ಅಧಿಕೃತವಾಗಿ ತಿಳಿಸಿದೆ.

ಆದರೆ, ದೇಶದಲ್ಲಿ ಸದ್ಯ ಕೊರೋನಾ ಹೆಚ್ಚುತ್ತಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ದೇಶದ 12 ರಾಜ್ಯಗಳಲ್ಲಿ ಕೋವಿಡ್ ಹೆಚ್ಚುತ್ತಿದ್ದರೆ, 19 ರಾಜ್ಯಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಇನ್ಸಾಕಾಗ್ ತನ್ನ ಬುಲೆಟಿನ್ನಲ್ಲಿ ತಿಳಿಸಿದೆ.

ಹೊಸತಾಗಿ ಪತ್ತೆಯಾಗಿರುವ ಎಕ್ಸ್ಇ ಉಪತಳಿಯನ್ನು ಬಿಎ.2.10 ಹಾಗೂ ಬಿಎ.2.12 ಎಂದು ವರ್ಗೀಕರಿಸಲಾಗಿದೆ. ಇದು ಒಮಿಕ್ರೋನ್ನ ಬಿಎ.2 ತಳಿಯ ಉಪತಳಿಯಾಗಿದೆ. ಈ ಉಪತಳಿಯ ಸೋಂಕು ತಗಲಿದವರಲ್ಲಿ ಕೊರೋನಾದ ತೀವ್ರತೆ ಹೆಚ್ಚಿರುತ್ತದೆ ಎಂಬುದು ಈವರೆಗೂ ಖಚಿತಪಟ್ಟಿಲ್ಲ.

ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಇನ್ಸಾಕಾಗ್ ಹೇಳಿದೆ. ಆದರೆ, ಎಕ್ಸ್ಇ ಉಪತಳಿ ಪತ್ತೆಯಾಗಿರುವುದು ಯಾವ ರಾಜ್ಯ ಅಥವಾ ಯಾವ ಊರಿನಲ್ಲಿ ಎಂಬುದನ್ನು ಅದು ತಿಳಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಸನ್ಯಾಸ ದೀಕ್ಷೆ ಸ್ವೀಕಾರ?