Select Your Language

Notifications

webdunia
webdunia
webdunia
webdunia

ಎಲೆಕ್ಟ್ರಿಕ್ ವಾಹನ ಖರೀದಿಸೋರಿಗೆ ಗುಡ್ನ್ಯೂಸ್!

ಎಲೆಕ್ಟ್ರಿಕ್ ವಾಹನ ಖರೀದಿಸೋರಿಗೆ ಗುಡ್ನ್ಯೂಸ್!
ನವದೆಹಲಿ , ಶುಕ್ರವಾರ, 6 ಆಗಸ್ಟ್ 2021 (10:05 IST)
ನವದೆಹಲಿ(ಆ.06): ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಬ್ಯಾಟರಿ ಚಾಲಿತ ವಾಹನಗಳಿಗೆ ನೋಂದಣಿ ಮತ್ತು ನೋಂದಣಿ ಪ್ರಮಾಣಪತ್ರ ಪರಿಷ್ಕರಣೆ ಶುಲ್ಕದಿಂದ ವಿನಾಯಿತಿ ನೀಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.

ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ನೋಂದಣಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಹೀಗಾಗಿ ನೂತನ ಅಧಿಸೂಚನೆ ಎಲೆಕ್ಟ್ರಿಕ್ ವಾಹನಗಳ ದರವನ್ನು ಕಡಿಮೆ ಮಾಡುವುದರ ಜೊತೆ ದೇಶದಲ್ಲಿ ಏಕರೂಪದ ದರವನ್ನು ನಿಗದಿಪಡಿಸಲು ನೆರವಾಗಲಿದೆ. ಈ ಸಂಬಂಧ ಸಚಿವಾಲಯ 2021ರ ಮೇನಲ್ಲಿ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಇದೀಗ ಈ ಪ್ರಸ್ತಾವನೆ ಜಾರಿಗೆ ಬಂದಿದೆ.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕಡಿಮೆ ಇದ್ದು, 2020-21ನೇ ಹಣಕಾಸು ವರ್ಷದಲ್ಲಿ 238,120 ವಾಹನಗಳು ಮಾರಾಟವಾಗಿವೆ. ಇದು 2020ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೆ.19.41ರಷ್ಟುಕಡಿಮೆ ಆಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಿಂದ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

SBI ಬ್ಯಾಂಕ್ ಅಲರ್ಟ್; ಆ.6 ಮತ್ತು 7ಕ್ಕೆ ನೆಟ್ಬ್ಯಾಕಿಂಗ್, ಮೊಬೈಲ್ ಆ್ಯಪ್ ಸೇವೆ ಸ್ಥಗಿತ!