ಕೊರೊನಾ ವಿರುದ್ಧ ಲಸಿಕೆ ಪರಿಣಾಮಕಾರಿ ಎಂಬುದು ಸಾಭೀತಾಗಿದೆ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಭಾರತದಲ್ಲಿ ಕೊರೊನಾ ಲಸಿಕೆ ಇನ್ನೂ ಮಕ್ಕಳಿಗೆ ಲಭ್ಯವಾಗಿಲ್ಲ. ಎಲ್ಲವೂ ಸರಿಯಾದ್ರೆ ಮುಂದಿನ ತಿಂಗಳು ದೇಶದ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ. ಇದ್ರ ನಂತ್ರ ಶಾಲೆ ತೆರೆಯುವುದು ಸುಲಭವಾಗಲಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ನಿರ್ದೇಶಕಿ ಪ್ರಿಯಾ ಅಬ್ರಹಾಂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ಕೋವಿಡ್ - 19 ಲಸಿಕೆ ಸೆಪ್ಟೆಂಬರ್ ನಿಂದ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. ಎರಡು ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯ ನೀಡಲು, ಪ್ರಯೋಗ ನಡೆಯುತ್ತಿದೆ. ಲಸಿಕೆ ಪ್ರಯೋಗ 2 ಮತ್ತು ಮೂರನೇ ಹಂತದಲ್ಲಿದೆ ಎಂದಿದ್ದಾರೆ.
ಶೀಘ್ರದಲ್ಲೇ ಪ್ರಯೋಗದ ಫಲಿತಾಂಶ ಲಭ್ಯವಾಗುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ. ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಸೆಪ್ಟೆಂಬರ್ನಲ್ಲಿ ಅಥವಾ ನಂತರ ಮಕ್ಕಳಿಗೆ ಸಿಗಲಿದೆ. ಜೈಡಸ್ ಕ್ಯಾಡಿಲಾ ಲಸಿಕೆ ಪ್ರಯೋಗವೂ ನಡೆಯುತ್ತಿದೆ.
ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರೂಪಾಂತರವು ಡೆಲ್ಟಾ ರೂಪಾಂತರದಷ್ಟು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಲಸಿಕೆ ಹಾಕಿದ ಜನರಲ್ಲಿ ಈ ರೂಪಾಂತರದ ವಿರುದ್ಧ ಎಷ್ಟು ಪ್ರತಿಕಾಯ ಉತ್ಪತ್ತಿಯಾಗ್ತಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.