Select Your Language

Notifications

webdunia
webdunia
webdunia
webdunia

ಡೆಲ್ಟಾ ರೂಪಾಂತರಿ ವೇಗ, ಪ್ರಬಲ ಸೋಂಕು : ಐಸಿಎಂಆರ್

ಡೆಲ್ಟಾ ರೂಪಾಂತರಿ ವೇಗ, ಪ್ರಬಲ ಸೋಂಕು : ಐಸಿಎಂಆರ್
ನವದೆಹಲಿ , ಗುರುವಾರ, 19 ಆಗಸ್ಟ್ 2021 (11:35 IST)
ನವದೆಹಲಿ: ದೇಶದಲ್ಲಿ ಕಾಣಿಸಿಕೊಂಡಿರುವ ಡೆಲ್ಟಾ ಸೋಂಕು ತೀವ್ರ ಸ್ವರೂಪವಾಗಿದ್ದು, ಲಸಿಕೆ ಹಾಕಿಸಿಕೊಂಡವರು, ಮತ್ತು ಲಸಿಕೆ ಹಾಕಿಸಿಕೊಳ್ಳದವರನ್ನೂ ಬಹಳ ವೇಗವಾಗಿ ಕಾಡಲಿದೆ ಎಂಬ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಬಹಿರಂಗ ಪಡಿಸಿದೆ.

ಕೆಲ ಅಧ್ಯಯನಗಳಿಂದ ಡೆಲ್ಟಾ ಸೋಂಕು ತೀವ್ರವಾಗಿದೆ ಎಂದು ಮಂಡಳಿ ಹೇಳಿದೆ. ಆದರೆ ಮರಣ ಪ್ರಮಾಣ ಕಡಿಮೆಯಿರಲಿದೆ ಎಂದೂ ಅಧ್ಯಯನ ವರದಿ ಹೇಳಿರುವುದಾಗಿ ವೈದ್ಯಕೀಯ ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲೂ ಪ್ರಕಟವಾಗಿದೆ.
ಅಧ್ಯಯನದ ಸಂಶೋಧನೆಗಳು ಡೆಲ್ಟಾ ರೂಪಾಂತರ ಅಥವಾ ಃ.1.617.2 ನ ಹರಡುವಿಕೆಯು ಲಸಿಕೆ ಹಾಕದ ಗುಂಪುಗಳ ನಡುವೆ ಭಿನ್ನವಾಗಿರುವುದಿಲ್ಲ ಎಂಬುದು ಗೊತ್ತಾಗಿದೆ. ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಹರಡುತ್ತಿರುವ ಪ್ರಬಲವಾದ ತಳಿ ಎಂದೂ ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಸೆಪ್ಟೆಂಬರ್ ನಿಂದ ಮಕ್ಕಳಿಗೂ ಕೋವಿಡ್ ಲಸಿಕೆ!