ಬೆಂಗಳೂರು : ಎಷ್ಟೋ ಬಾರಿ ಕೆಲ ಆಟೋ ಚಾಲಕರು ಮೀಟರ್ ಬಳಸದೆಯೇ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಾರೆ. ಅಲ್ಲದೆ ದಾರಿ ಮಧ್ಯೆ ಅನುಚಿತ ವರ್ತನೆ, ಕಿರಿಕಿರಿ ಉಂಟು ಮಾಡಿದರೆ, ಸಾರ್ವಜನಿಕರಿಗೆ ದೂರು ನೀಡಲು ಸಹಾಯವಾಗುವ ಕ್ಯೂಆರ್ ಕೋಡ್ ಅನ್ನು ತರಲು ನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.
ಅದೂ ಇನ್ನು ಕೇವಲ ಎರಡೇ ತಿಂಗಳಲ್ಲಿ ಆ ಕ್ಯೂ ಆರ್ ಕೋಡ್ ಜಾರಿಗೆ ತರಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಆಟೋಗಳಲ್ಲಿ ದುಪ್ಪಟ್ಟು ದರ ವಸೂಲಿ, ಪ್ರಯಾಣಿಕರ ಜೊತೆ ಜಗಳಕ್ಕೆ ಕಡಿವಾಣ ಹಾಗೂ ಪ್ರಯಾಣಿಕರ ನೆರವಿಗೆ ಹೊಸ ಯೋಜನೆ ರೂಪಿಸಲು ಮುಂದಾಗಿದ್ದ ನಗರ ಸಂಚಾರ ಪೊಲೀಸರು, ಈಗ ಅದರ ಕಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಡಿಸ್ಪ್ಲೇ ಬೋರ್ಡ್ಗೆ ಬದಲಾಗಿ ಕ್ಯೂ ಆರ್ ಕೋಡ್ ಹಾಗೂ ಆಪ್ ಬಗ್ಗೆ ಆಟೋ ಚಾಲಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಆಟೋ ದರ ಹೆಚ್ಚಳ, ಮೀಟರ್ ಹಾಕಲ್ಲ, ಅದೂ ಇದೂ ಅನ್ನೋ ದೂರುಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸ್ ಇಲಾಖೆ ಮುಂದಾಗಿದೆ.