ಬಿಎಂಟಿಸಿ ಬಸ್ ಎಲ್ಲಿದೆ ಎಂದು ತಿಳಿಸುವ "ನಿಮ್ಮ ಬಸ್"ಅಪ್ಲಿಕೇಶನ್ ಪ್ರಾರಂಭ ಮಾಡಲು ಈಗಾಗಲೇ ಮೂರರಿಂದ ನಾಲ್ಕು ಬಾರಿ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಬಿಡುಗಡೆಗೂ ಮುನ್ನವೇ "ನಿಮ್ ಬಸ್" ಆ್ಯಪ್ ಹೆಸರು ಬದಲಾವಣೆಗೆ ಬಿಎಂಟಿಸಿ ಮುಂದಾಗಿದೆ.
"ನಿಮ್ಮ ಬಸ್"ಅಪ್ಲಿಕೇಶನ್ ಬಳಕೆದಾರರಿಗೆ ಸರಿಯಾದ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು, ಪ್ರಯಾಣ ತೊಂದರೆಯಿಂದ ಮುಕ್ತವಾಗಿಸಲು ಸಹಕಾರಿಯಾಗಲಿದ್ದು,ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಮಾಹಿತಿಯನ್ನು ಸಹ ಇಲ್ಲಿ ತಿಳಿಯಬಹುದಾಗಿದೆ.ಇದರ ಸಾಫ್ಟ್ ಲಾಂಚ್‌ನಲ್ಲಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು ಪ್ರವೇಶವನ್ನು ನೀಡಲಾಗುತ್ತು. ನಂತರ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಆ್ಯಪ್ ಅನ್ನು ಮತ್ತಷ್ಟು ಉತ್ತಮಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿದ್ವು, ಇನ್ನು ಆ್ಯಪ್‌ಗೆ ಹೊಸದಾಗಿ ಹೆಸರಿಡಲು ಬಿಎಂಟಿಸಿ ಮುಂದಾಗಿದ್ದು, ಹೊಸ ಹೆಸರಿಗಾಗಿ ಹುಡುಕಾಟ ನಡೆಸುತ್ತಿದೆ. ಆದ್ದರಿಂದ ಆ್ಯಪ್ ಬಿಡುಗಡೆ ಮತ್ತಷ್ಟು ವಿಳಂಬವಾಗುತ್ತಿದೆ.