ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡುತ್ತಿದ್ದ ಜಾಲವನ್ನ ಪತ್ತೆ ಹಚ್ಚಿ 9 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ನೀಡಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಗುಜರಾತ್ ಮೂಲದ ಶಿಬು ಬಂಧಿತನಾಗಿದ್ದು ಹಲವು ವರ್ಷಗಳಿಂದ ಶೀಲಂಕಾ ಸೇರಿ ಕೆಲ ದೇಶಗಳ ಏಜೆಂಟ್ ರೊಂದಿಗೆ ಸಂಪರ್ಕ ಸಾಧಿಸಿ ವಿದೇಶಿಯರಿಗೆ ವಾಮಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸುತ್ತಿದ್ದ. ಫ್ರಾನ್ಸ್ ನಲ್ಲಿ ಕೆಲ ಕಾಲ ಶೆಫ್ ಆಗಿ ಕೆಲಸ ಮಾಡುವಾಗ ಶ್ರೀಲಂಕಾ ಮೂಲದ ಮಧ್ಯವರ್ತಿಯ ಪರಿಚಯಸಿಕೊಂಡು ಅಲ್ಲಿನ ಪ್ರಜೆಗಳನ್ನ ಸಂಪರ್ಕಿಸಿ ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುವ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಪ್ರಕರಣದಲ್ಲಿ ಬಂಧಿನಾಗಿರುವ ಎ1 ಆರೋಪಿ ಅಮಿನ್ ಶೇಟ್ ನೀಡಿದ ಸುಳಿವು ನೀಡಿದ ಮಾಹಿತಿ ಶಿಬು ಎಂಬಾತನನ್ನ ಬಂಧಿಸಲಾಗಿದೆ. ಶಿಬು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದ್ದು ಇನ್ನೋರ್ವ ಆರೋಪಿ ಸುಳಿವು ದೊರತಿದ್ದು ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಧಾರ್ ಕಾರ್ಡ್, ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸೇರಿದಂತೆ ಇನ್ನಿತರ ದಾಖಲಾತಿಗಳನ್ನ ನಕಲಿಯಾಗಿ ಸೃಷ್ಟಿಸಿ, ಅಪರಾಧ ಹಿನ್ನೆಲೆ ಇರುವ ಆರೋಪಿಗಳು ಹಾಗೂ ವಿದೇಶಿಯರಿಗೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುತ್ತಿದ್ದ ಐವರು ವಿದೇಶಿಯರು ಸೇರಿ 9 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಅಕ್ರಮ ಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ, ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಮಣಿವೇಲು, ಶೀಜು, ವಿಶಾಲ್ ನಾರಾಯಣ್, ಅಮೀನ್ ಸೇಟ್ ಬಂಧಿಸಲಾಗಿತ್ತು.
ಪಾಸ್ ಪೋರ್ಟ್, ಚಾಲನ ಪರವಾನಗಿ ಸೇರಿದಂತೆ ನಕಲಿ ದಾಖಲಾತಿ ಇರುವವರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು ಡ್ಯಾಕುಮೆಂಟ್ಸ್ ಇಲ್ಲದಿದ್ದರೂ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಬೆಂಗಳೂರಿನಲ್ಲಿ ಆಧಾರ್ ಕಾರ್ಡ್, ಅಂಕಪಟ್ಟಿ, ವಿಳಾಸಪತ್ರ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಫೋರ್ಜರಿ ಮಾಡುತ್ತಿದ್ದರು. ಅಲ್ಲದೇ ಒಂದು ಪಾಸ್ ಪೋರ್ಟ್ ಗೆ 45 ಸಾವಿರಾರು ರೂಪಾಯಿ ಹಣ ಪಡೆದು ಪಾಸ್ಪೋರ್ಟ್ ಕೇಂದ್ರಕ್ಕೆ ಹೋಗಿ ದಾಖಲಾತಿಗಳನ್ನ ಅಸಲಿ ಎಂಬಂತೆ ಬಿಂಬಿಸುತ್ತಿದ್ದರು.
ಪೊಲೀಸ್ ವೇರಿಫಿಕೇಷನ್ ವೇಳೆಯಲ್ಲಿಯೂ ನಕಲಿ ರೆಂಟಲ್ ಅಗ್ರಿಮೆಂಟ್ ಸೃಷ್ಟಿಸಿ, ಅಪರಿಚಿತರ ಮನೆಯನ್ನೇ ತಮ್ಮ ಮನೆಯೆಂದು ಸುಳ್ಳು ಹೇಳಿ ಯಾಮಾರಿಸುತ್ತಿದ್ದರು. ಸೂಕ್ತ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದ್ದ ಇಬ್ಬರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಸ್ಪೆಂಡ್ ಮಾಡಲಾಗಿತ್ತು.
ವ್ಯವಸ್ಥಿತ ಜಾಲದಿಂದ ಶ್ರೀಲಂಕಾ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಬೆಂಗಳೂರಿಗೆ ಬಂದರೆ ಸುಲಭವಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಕರೆಯಿಸಿಕೊಂಡಿದ್ದರು. ಶ್ರೀಲಂಕಾದಲ್ಲಿನ ರಾಜಕೀಯ ಅಸ್ಥಿರತೆ ಹಿನ್ನೆಲೆ ವಾಮಾಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಒಮ್ಮೆ ಶ್ರೀಲಂಕಾಕ್ಕೆ ಹೋಗಿ ನಂತರ ಸೌದಿ ಅರೆಬೀಯಾಗೆ ಹೋಗಲು ಬಂಧಿತ ವಿದೇಶಿ ಪ್ರಜೆಗಳು ಸಿದ್ಧತೆ ನಡೆಸಿಕೊಂಡಿದ್ದರು. ಕೇವಲ ವಿದೇಶಿಯರಿಗೆ ಮಾತ್ರವಲ್ಲದೆ ಅಪರಾಧ ಹಿನ್ನೆಲೆ ಇರುವ ಕುಖ್ಯಾತ ಕ್ರಿಮಿನಲ್ಗಳಿಗೂ ವೀಸಾ ಮಾಡಿಸಿಕೊಳ್ಳುತ್ತಿದ್ದ ಆರೋಪಿಗಳು ಚಿಕ್ಕಮಗಳೂರು ಮೂಲದ 36 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನಿಗೂ ಪಾಸ್ ಪೋರ್ಟ್ ಮಾಡಿಸಿದ್ದರು. ಜೊತೆಗೆ ಕೊಲೆ, ದರೋಡೆ ಪ್ರಕರಣದ ಮೂವರು ಆರೋಪಿಗಳು ಸಹ ವಾಮಾಮಾರ್ಗವಾಗಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ಇದುವರೆಗೂ 50ಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಮಾಡಿಸಿಕೊಂಡಿರುವ ಮಾಹಿತಿ ದೊರೆತಿದ್ದು, ತನಿಖೆಯನ್ನು ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.