Select Your Language

Notifications

webdunia
webdunia
webdunia
webdunia

ಫ್ಲೋರಿಡಾದಲ್ಲಿ ಗುಂಡಿನ ದಾಳಿ

ಫ್ಲೋರಿಡಾದಲ್ಲಿ ಗುಂಡಿನ ದಾಳಿ
ಅಮೆರಿಕ , ಬುಧವಾರ, 1 ಫೆಬ್ರವರಿ 2023 (21:41 IST)
ಅಮೆರಿಕದ ಫ್ಲೋರಿಡಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಅಮೆರಿಕದಲ್ಲಿ ದಿನಕಳೆದಂತೆ ಶೂಟೌಟ್ ಪ್ರಕರಣಗಳು ಹೆಚ್ಚುತ್ತಿವೆ. ದುಷ್ಕರ್ಮಿಗಳು ಚಲಿಸುತ್ತಿರುವ ವಾಹನದಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅಲ್ಲಿಂದ ದುಷ್ಕರ್ಮಿಗಳು ತೆರಳಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಗಾಯಗೊಂಡವರೆಲ್ಲರೂ 20 ರಿಂದ 35 ವರ್ಷ ವಯಸ್ಸಿನ ವಯಸ್ಕ ಪುರುಷರು, ಘಟನಾ ಸ್ಥಳದಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕತೆಯ ಪ್ರಗತಿ ದರ ತುಸು ಕುಂಠಿತ