Select Your Language

Notifications

webdunia
webdunia
webdunia
webdunia

3 ಕೋಟಿ ರಸ್ತೆ; ಮೂರೇ ತಿಂಗಳಿಗೆ ಢಮಾರ್‌

3 ಕೋಟಿ ರಸ್ತೆ; ಮೂರೇ ತಿಂಗಳಿಗೆ ಢಮಾರ್‌
ಚಿಕ್ಕಮಗಳೂರು , ಬುಧವಾರ, 1 ಫೆಬ್ರವರಿ 2023 (16:47 IST)
ಜನರನ್ನು ಸೆಳೆಯುವ ಸಲುವಾಗಿ ಕೆಲ ರಾಜಕೀಯ ಮುಖಂಡರು ಅಭಿವೃದ್ಧಿ ಮಂತ್ರಿ ಪಠಿಸುತ್ತಾರೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಣ್ಣಿನಪಾಲ್​ನಲ್ಲಿ 3 ಕೋಟಿ ಖರ್ಚು ಮಾಡಿ ನಿರ್ಮಿಸಲಾದ ರಸ್ತೆ ಮೂರೇ ತಿಂಗಳಿಗೆ ಢಮಾರ್​ ಆಗಿದೆ. ಹೊರನಾಡು, ಮಾವಿನಹೊಲ, ಮಣ್ಣಿನ ಪಾಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ನಕ್ಸಲ್ ಪೀಡಿತ ಪ್ರದೇಶದ ರಸ್ತೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸುಮಾರು 3 ಕಿಲೋ ಮೀಟರ್‌ ಕಾಂಕ್ರೀಟ್‌ ರಸ್ತೆ ಸಂಪೂರ್ಣ ಕಳಪೆಯಾಗಿದ್ದು, ಜನ ಓಡಾಡಿದ್ರೆ ಸಾಕು ಜಲ್ಲಿ ಪುಡಿ ಮೇಲೇಳುತ್ತಿದೆ. ಶಾಸಕ ಕುಮಾರಸ್ವಾಮಿಯೇ ಈ ರಸ್ತೆಯನ್ನು ಉದ್ಘಾಟಿಸಬೇಕೆಂದು ಶಾಸಕರ ಬೆಂಬಲಿಗರು ರಸ್ತೆಗೆ ಬೀಗ ಹಾಕಿದ್ರು. ಇದೇ ರಸ್ತೆ ಉದ್ಘಾಟನೆ ವಿಚಾರವಾಗಿ ಶಾಸಕ ವಿವಾದಕ್ಕೆ ಗುರಿಯಾಗಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ ಪಾತ್ ವ್ಯಾಪಾರಿಗಳಿಂದ ಪಾದಚಾರಿಗಳಿಗೆ ಕಿರಿಕಿರಿ