Select Your Language

Notifications

webdunia
webdunia
webdunia
webdunia

ಶೋಚನೀಯ ಸ್ಥಿತಿ ತಲುಪಿದ ಇಂದಿರಾ ಕ್ಯಾಂಟೀನ್

webdunia
bangalore , ಬುಧವಾರ, 1 ಫೆಬ್ರವರಿ 2023 (16:22 IST)
ಹೊಸದ್ರಲ್ಲಿ ಅಗಸ ಎತೆತ್ತಿ ಒಗೆದಂಗೆ ಇಂದಿರಾ ಕ್ಯಾಂಟೀನ್ ಓಪನ್ ಆಗಿದ್ದೆ ಆಗಿದ್ದು. ಸಿದ್ದರಾಮಯ್ಯ ಕಾಲದಲ್ಲಿ ಹೇಗೋ ನಡೀತಿದ್ದ ಈ ಬಡವರ ಉಪಹಾರ ಮಂದಿರಗಳು ತದನಂತರ ಯಾಕೋ ಭಾರೀ ನಿರ್ಲಕ್ಷ್ಯಕ್ಕೆ ಒಳಗಾಯ್ತು. ಅಲ್ಲದೆ ಈ ವಿಚಾರ ರಾಜಕೀಯ ಕೆಸರೇರಾಚಟಕ್ಕೂ ಸಹ ಕಾರಣವಾಗಿತ್ತು. ಆದ್ರು ಸಹ ಹೇಗೋ ಇಂದಿರಾ ಕ್ಯಾಂಟೀನ್ ಗಳು ನಡೆದುಕೊಂಡು ಅಲ್ಲ, ತೆವಲಿಕೊಂಡು ಕಾರ್ಯಾಚರಣೆ ಮಾಡ್ತಿತ್ತು. ಆದ್ರೆ ಇದೀಗ ಶೋಚನೀಯ ಸ್ಥಿತಿ ತಲುಪಿದೆ.
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟಿನ್ಗಳನ್ನು ಆರಂಭ ಮಾಡಿದ್ದರು. ಇಂದಿರಾ ಕ್ಯಾಂಟೀನ್ಗಳಲ್ಲಿ ಬಡವರು, ಕೂಲಿಕಾರ್ಮಿಕರು ಊಟ ಮಾಡಿ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಆದರೆ ಈಗ ಈ ಯೋಜನೆ ನಿರ್ವಹಣೆಯಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಇಂದಿರಾ ಕ್ಯಾಂಟೀನ್ಗಳು ಮುಚ್ಚು ಹೋಗ್ತಾವಾ ಎಂಬ ಆತಂಕ ಎದುರಾಗಿದೆ. ಏಕೆಂದರೆ ಮೆಜೆಸ್ಟಿಕ್ನ ಇಂದಿರಾ ಕ್ಯಾಂಟೀನ್ ಸೇರಿದಂತೆ ನಗರದ ಹಲವು ಇಂದಿರಾ ಕ್ಯಾಂಟೀನ್ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜಲಮಂಡಳಿ ವಾಟರ್ ಪೈಪ್ಲೈನ್ ಕಟ್ ಮಾಡಿದ್ದು, ನೀರಿಲ್ಲದೇ ದುಡ್ಡಿಗೆ ಹೊರಗಡೆ ನೀರು ತಂದು ನಡೆಸುತ್ತಿದ್ದಾರೆ.
 
ನಗರದ 8 ವಲಯಗಳಲ್ಲೂ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ವಾಟರ್ ಬಿಲ್ ಬಾಕಿಯಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ವಾಟರ್ ಬಿಲ್ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದ್ರು ಬಿಬಿಎಂಪಿ ಬಿಲ್ ಪಾವತಿಸಿ ಸಮಸ್ಯೆ ಕ್ಲಿಯರ್ ಮಾಡುವ ಗೋಜಿಗೆ ಹೋಗಿಲ್ಲ. ಸುಮಾರು ಏಳೇಂಟು ತಿಂಗಳ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಇಂದಿರಾ ಕ್ಯಾಂಟೀನ್ಗೆ ಬರುವ ಗ್ರಾಹಕರು ಕೂಡ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದು, ಊಟ ಚೆನ್ನಾಗಿದೆ ಮೂರು ಟೈಂ ನಾವು ಇಲ್ಲಿಯೇ ಊಟ ಮಾಡುತ್ತೇವೆ. ಆದರೆ ನೀರಿನ ಸಮಸ್ಯೆ ಇದೆ, ಅದನ್ನು ಕ್ಲಿಯರ್ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ.ಹೀಗಾಗಿ ಈ ಸಮಸ್ಯೆಯನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಬೇಕಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ : ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ