ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ಬಜೆಟ್ನಲ್ಲಿ ಅನೇಕ ವಸ್ತುಗಳ ಮೇಲಿನ ಸುಂಕವನ್ನು ಏರಿಕೆ ಮತ್ತು ಇಳಿಕೆ ಮಾಡಿದ್ದರಿಂದ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.
									
			
			 
 			
 
 			
			                     
							
							
			        							
								
																	ಕ್ಯಾಮೆರಾ, ಲೆನ್ಸ್, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ಫೋನ್ ಚಾರ್ಜರ್, ಟಿವಿ ಪ್ಯಾನಲ್ಗಳ ಬಿಡಿಭಾಗಗಳು, ಈಥೈಲ್ ಆಲ್ಕೋಹಾಲ್, ಸಿಗಡಿ ಉತ್ಪನ್ನ, ಇಂಗು, ಕೋಕೋ ಬೀಜಗಳು ಕಡಿಮೆಯಾಗುತ್ತಿವೆ. ಇವುಗಳ ಮೇಲಿನ ಆಮದು ಸುಂಕವನ್ನು ನಿರ್ಮಲಾ ಸೀತಾರಾಮನ್ ಇಳಿಸಿದ್ದಾರೆ. 
									
										
								
																	ಸಿಗರೇಟ್, ಎಲೆಕ್ಟ್ರಿಕ್ ಕಿಚನ್ ಚಿಮಣಿ, ಹೆಡ್ಫೋನ್, ಇಯರ್ ಫೋನ್, ಛತ್ರಿ, ಚಿನ್ನ, ಬೆಳ್ಳಿ, ಪ್ಲಾಟಿನಂ, ರಬ್ಬರ್ ಉತ್ಪನ್ನ, ಆಭರಣ, ತಾಮ್ರದ ಸ್ಕ್ಯಾಪ್, ಸ್ಮಾರ್ಟ್ ಮೀಟರ್, ಸೋಲಾರ್ ಸೆಲ್, ಸೋಲಾರ್ ಮೋಡೆಲ್ಗಳು, ಜವಳಿ, ಅಡಿಗೆ ಮನೆಯ ಚಿಮಿಣಿ, ಎಕ್ಸ್ರೇ ಯಂತ್ರ, ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಏರಲಿದೆ. ಇವುಗಳ ಮೇಲಿನ ಸುಂಕವನ್ನು ಏರಿಸಲಾಗಿದೆ.