Select Your Language

Notifications

webdunia
webdunia
webdunia
webdunia

ಪೊಲೀಸ್ ಎಂದು ಹೇಳಿ ಹಣ ವಸೂಲಿ ಮಾಡಿದವ ಅಂದರ್

Ander claimed to be a policeman and collected the money
bangalore , ಬುಧವಾರ, 1 ಫೆಬ್ರವರಿ 2023 (13:27 IST)
ಪೊಲೀಸ್ ಎಂದು ಹೇಳಿಕೊಂಡು ಪಾರ್ಕ್ ನಲ್ಲಿ ಕುಳಿತಿದ್ದ ಯುವಕ,ಯುವತಿಯಿಂದ ಒಂದು ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದ ಹೋಂಗಾರ್ಡ್ ನನ್ನು ಹೆಚ್ ಎಲ್ ಪೊಲೀಸರು ಬಂಧಿಸಿದ್ದಾರೆ.‌ ಮಂಜುನಾಥ್ ರೆಡ್ಡಿ‌ ಬಂಧಿತ ಆರೋಪಿಯಾಗಿದ್ದಾನೆ. ಇದೇ ತಿಂಗಳ 29ರಂದು ಅರ್ಷಾ ಲತೀಫ್ ಎಂಬ ಯುವತಿ ಕುಂದಲಹಳ್ಳಿಯ ಕೆರೆ ಬಳಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿ, ಇಬ್ಬರ ಫೋಟೋ ಕ್ಲಿಕ್ಕಿಸಿಕೊಂಡು ಇಲ್ಲಿ ಯಾಕೆ ಕುಳಿತಿದ್ದೀರಿ ಎಂದು ವಿಚಾರಿಸಿದ್ದ. ನಂತರ ಸ್ಟೇಷನ್ ಗೆ ಬರುವಂತೆ ಹೆದರಿಸಿದ್ದ. ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕು,ಠಾಣೆಗೆ ಬಂದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ.
ಇಲ್ಲೇ ಆದರೆ ಸಾವಿರ ಫೈನ್ ಕಟ್ಟುವಂತೆ ಹೆದರಿಸಿ 1000 ರೂಪಾಯಿ ಹಣ ಪಡೆದಿದ್ದ. ಇದರಿಂದ ನೊಂದಿದ್ದ ಯುವತಿ ಕಾನ್ಸ್‌ಟೇಬಲ್ ಬೆದರಿಸಿ ಹಣ ಪಡೆದಿದ್ದಾರೆ ಎಂದು ಟ್ವೀಟ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಳು. ಸದ್ಯ ಈ ಟ್ವೀಟ್ ಆಧಾರದ ಮೇಲೆ‌ ತನಿಖೆ ನಡೆಸಿರುವ ಪೊಲೀಸರು ಪೊಲೀಸ್ ಎಂದು ಹೇಳಿಕೊಂಡು ಬೆದರಿಸಿ ಒಂದು ಸಾವಿರ ಹಣ ಪಡೆದಿದ್ದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಯುವತಿ ಅರ್ಷಾ ಲತೀಫ್ ಮಾಡಿದ್ದ ಟ್ವೀಟ್ ಸಾಮಾಜಿಕ  ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.   ಈಗ ಪೊಲೀಸ್ ಎಂದು ಸುಳ್ಳು ಹೇಳಿ ಬೆದರಿಸಿದ್ದ ಹೋಂ ಗಾರ್ಡ್ ಬಂಧನದಿಂದ ಪೊಲೀಸ್ ಇಲಾಖೆ ಮೇಲೆ ಮಾಡಲಾಗಿದ್ದ ಆರೋಪವೊಂದು ಸುಳ್ಳಾಗಿದೆ.ಈ ಹಿಂದೆ ಸಂಪಿಗೆಹಳ್ಳಿ, ಆಡುಗೋಡಿ ಪೊಲೀಸರು ಜನರಿಂದ ವಸೂಲಿ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿ ಬಂದಿದ್ದಾಗ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದನ್ನ ಸ್ಮರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ : ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ