Select Your Language

Notifications

webdunia
webdunia
webdunia
webdunia

ಮದ್ಯಪ್ರಿಯರಿಗೆ ಗುಡ್‌ನ್ಯೂಸ್!

ಮದ್ಯಪ್ರಿಯರಿಗೆ ಗುಡ್‌ನ್ಯೂಸ್!
ನವದೆಹಲಿ , ಮಂಗಳವಾರ, 6 ಸೆಪ್ಟಂಬರ್ 2022 (10:34 IST)
ನವದೆಹಲಿ : 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ.
 
ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ 500 ಮದ್ಯದಂಗಡಿಗಳು ಹಾಗೂ 2022ರ ವರ್ಷಾಂತ್ಯದ ವೇಳೆಗೆ ಇನ್ನೂ 200 ಅಂಗಡಿಗಳು ಸೇರಿ 700 ಮದ್ಯದಂಗಡಿಗಳು ತಲೆ ಎತ್ತಲಿವೆ ಎಂದು ದೆಹಲಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಭಾಗವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕರೋಲ್ ಬಾಗ್, ರಾಜೌರಿ ಗಾರ್ಡನ್, ದ್ವಾರಕಾ, ಮುಂಡ್ಕಾ, ಶಿವಾಜಿ ಪಾರ್ಕ್, ಸುಲ್ತಾನ್ಪುರಿ, ಸುಭಾಷ್ ನಗರ ಮತ್ತು ಬಾದರ್ಪುರದ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡಲು ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. 

ಕಳೆದ ನವೆಂಬರ್ನಲ್ಲಿ ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಿ 849 ಮದ್ಯದಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಮತ್ತೆ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ಸುಮಾರು 65 ಮದ್ಯದಂಗಡಿಗಳು ಮುಚ್ಚಿದವು. ಇದರಿಂದ ಅಬಕಾರಿ ಇಲಾಖೆ ಆರ್ಥಿಕ ಕ್ರೋಢಿಕರಣಕ್ಕೆ ಸವಾಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ : ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ