Select Your Language

Notifications

webdunia
webdunia
webdunia
webdunia

ಉಚಿತ ಬಸ್ ಸಂಚಾರ : ಸಾರಿಗೆ ಇಲಾಖೆ ಲೆಕ್ಕ ಏನು?

ಉಚಿತ ಬಸ್ ಸಂಚಾರ : ಸಾರಿಗೆ ಇಲಾಖೆ ಲೆಕ್ಕ ಏನು?
ಬೆಂಗಳೂರು , ಬುಧವಾರ, 31 ಮೇ 2023 (06:35 IST)
ರಾಜ್ಯದ ಎಲ್ಲಾ ಹೆಣ್ಮಕ್ಕಳಿಗೂ ಷರತ್ತು ರಹಿತವಾಗಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಸಾಮಾನ್ಯ ಬಸ್ಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.

* ನಿತ್ಯ ಸರ್ಕಾರಿ ಬಸ್ಗಳಲ್ಲಿ ಸಂಚಾರ – 85 ಲಕ್ಷ ಮಂದಿ (ಅಂದಾಜು)
* ನಿತ್ಯ ಸಂಚರಿಸುವ ಮಹಿಳೆಯರು – 43 ಲಕ್ಷ ಮಂದಿ (ಅಂದಾಜು)
* ಉಚಿತ ಸಂಚಾರ ಘೋಷಣೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು

ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಎಲ್ಲಾ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಿರುವವರ ಅಂಕಿ-ಅಂಶ ವಿವರವನ್ನ ನೀಡಲಾಗಿದೆ. ಆಯಾ ನಿಗಮಗಳಲ್ಲಿ ಪ್ರಯಾಣಿಕರೆಷ್ಟು ಅನ್ನೋ ಅಂಕಿ-ಅಂಶಗಳ ಸಂಪೂರ್ಣ ಮಾಹಿತಿಯನ್ನು ಸಚಿವರು ಪಡೆದಿದ್ದಾರೆ.

ಸಾರಿಗೆ ನಿಗಮದಲ್ಲಿ ತೈಲಗಳಿಗೆ ಆಗುವ ವೆಚ್ಚಗಳ ಮಾಹಿತಿ, ಸಿಬ್ಬಂದಿಯ ವೇತನ ವೆಚ್ಚ ಹಾಗೂ ಆಗುವ ನಷ್ಟದ ಕುರಿತು ಸಚಿವರಿಗೆ ವಿವರವಾಗಿ ತಿಳಿಸಲಾಗಿದೆ. 4 ನಿಗಮಗಳು ಯಾವ ರೀತಿ ಕೆಲಸ ಮಾಡುತ್ತಿವೆ? ಯಾವ ಇಲಾಖೆಯ ಆದಾಯ ಹಾಗೂ ನಷ್ಟ ಎಷ್ಟು ಎಂಬ ಮಾಹಿತಿಯನ್ನು ಸಚಿವರು ಸಂಗ್ರಹಿಸಿದ್ದಾರೆ. 

ಇಂದು (ಬುಧವಾರ) ಸಿಎಂ ಹಾಗೂ ಸಚಿವರ ಸಭೆ ನಡೆಯಲಿದೆ. ಜೂನ್ 1ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದು ಮಹಿಳೆಯರ ಉಚಿತ ಪ್ರಯಾಣದ ಗ್ಯಾರಂಟಿ ಅಧಿಕೃತವಾಗಿ ಘೋಷಣೆಯಾಗಲಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಅಂತ ಸಚಿವರೇನೋ ಹೇಳಿದ್ದಾರೆ. ಆದರೆ ಯಾವಾಗಿನಿಂದ ಅನ್ನೋದು ಕ್ಯಾಬಿನೆಟ್ ಸಭೆ ಬಳಿಕ ಸ್ಪಷ್ಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಶ್ಯಕತೆ ಇದ್ದರೆ ಮಾತ್ರ ಪಠ್ಯ ಪರಿಷ್ಕರಣೆ ಮಾಡಲಾಗುವುದು-ಮಧು ಬಂಗಾರಪ್ಪ