Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಉಚಿತ ಪ್ರಯಾಣ : ಮಾರ್ಗಸೂಚಿಯಲ್ಲಿ ಏನಿದೆ?

ಮಹಿಳೆಯರಿಗೆ ಉಚಿತ ಪ್ರಯಾಣ : ಮಾರ್ಗಸೂಚಿಯಲ್ಲಿ ಏನಿದೆ?
ಬೆಂಗಳೂರು , ಶನಿವಾರ, 27 ಮೇ 2023 (14:29 IST)
ಬೆಂಗಳೂರು : ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಜಾರಿ ಸಂಬಂಧ ಸಾರಿಗೆ ಇಲಾಖೆ ಕೆಲಸ ಮಾಡುತ್ತಿದೆ. ಇನ್ನೆರಡು ದಿನದಲ್ಲಿ ಯೋಜನೆಯ ಖರ್ಚು, ವೆಚ್ಚದ ಸಂಪೂರ್ಣ ವರದಿಯನ್ನು ಸರ್ಕಾರದ ಮುಂದಿಡಲಿದೆ.

ಮೂರು ದಿನದ ಹಿಂದೆ ಗ್ಯಾರಂಟಿಗಳ ಜಾರಿ ವಿಚಾರವಾಗಿ ಆಯಾ ಇಲಾಖೆ ಹಣಕಾಸು ಮುಖ್ಯ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ ಮಾಡಿದ್ದಾರೆ. ಸಭೆಯಲ್ಲಿ ಈಗಾಗಲೇ ಯೋಜನೆ ಜಾರಿಗೆ ತಗಲುವ ವೆಚ್ಚ, ಅನುಷ್ಠಾನ, ಕ್ರಮಗಳ ಬಗ್ಗೆ ಮಾಹಿತಿ ಕೇಳಿರುವ ಸರ್ಕಾರ ಈ ಬಗ್ಗೆ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.

ಸಾರಿಗೆ ಇಲಾಖೆ ಅಧಿಕಾರಿಗಳು, ಸಾರಿಗೆ ಇಲಾಖೆಗೆ ಸದ್ಯ ಸ್ಕೀಂನಿಂದ ತಗಲುವ ವೆಚ್ಚ, ಜಿಲ್ಲೆ, ತಾಲೂಕುವಾರು ಪ್ರತಿನಿತ್ಯ ಸಂಚರಿಸುವ ಮಹಿಳೆಯರ ಸಂಖ್ಯೆ, ಈ ಎಲ್ಲ ಅಂಶಗಳ ಆಧಾರದ ಮೇಲೆ ವರದಿ ಸಿದ್ದಪಡಿಸುತ್ತಿದ್ದಾರೆ.   2-3  ದಿನದ ಒಳಗಡೆ ಸಂಪೂರ್ಣ ವರದಿ ಸಿದ್ದರಾಮಯ್ಯ ಅವರ ಕೈಸೇರಲಿದೆ.

ಮಾರ್ಗಸೂಚಿಯಲ್ಲಿ ಏನಿರಬಹುದು?

ಐಷಾರಾಮಿ ಬಸ್ಗಳಲ್ಲಿ ಫ್ರೀ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು ಸರ್ಕಾರಿ ಬಸ್ನಲ್ಲಿ ಸಂಚರಿಸುವ ಮಹಿಳೆಯರಿಗೆ ಪ್ರತ್ಯೇಕ ಪಾಸ್ ನೀಡಲು ಚಿಂತನೆ ನಡೆದಿದೆ.

ಉಚಿತ ಪ್ರಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಉಚಿತ ಬಸ್ ಬಳಸಲು ಮಹಿಳಾ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ. ಎಲ್ಲಾ ಪ್ರೀಮಿಯಂ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. 

ಬಿಎಂಟಿಸಿಯಲ್ಲಿ ಕೇವಲ ದುಡಿಯುವ ವರ್ಗದ ಮಹಿಳೆಯರಿಗಷ್ಟೇ ಉಚಿತ ಇರಲಿದ್ದು ಇತರೇ ಬಸ್ಗಳಲ್ಲಿ ಇಂತಿಷ್ಟು ಕಿಲೋ ಮೀಟರ್ ಒಳಗಡೆ ಸಂಚಾರ ನಿಯಮ ಬರುವ ಸಾಧ್ಯತೆಯಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ತಗುಲುವ ಹೊರೆಯನ್ನು ಸರ್ಕಾರ ಭರಿಸಲು ನಿರ್ಧಾರ ತೆಗೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಭವನದತ್ತ ಬರುತ್ತಿರುವ ಸಚಿವರ ಕುಟುಂಬಸ್ಥರು