Select Your Language

Notifications

webdunia
webdunia
webdunia
webdunia

ವಿಶ್ವದಾದ್ಯಂತ ಹೆಚ್ಚಾಯ್ತು ಫುಟ್‍ಬಾಲ್ ಫಿವರ್

ವಿಶ್ವದಾದ್ಯಂತ  ಹೆಚ್ಚಾಯ್ತು ಫುಟ್‍ಬಾಲ್ ಫಿವರ್
ಬೆಂಗಳೂರು , ಮಂಗಳವಾರ, 29 ನವೆಂಬರ್ 2022 (14:38 IST)
ಬೆಂಗಳೂರು : ವಿಶ್ವದಾದ್ಯಂತ ಈಗ ಫಿಫಾ ಫೀವರ್ ಜೋರಾಗಿದೆ. 2022ರ ಫಿಫಾ ಆ್ಯಂಥಮ್ ಸಾಂಗ್ ಸಹ ಕಾಲ್ಚೆಂಡಿನ ಆಟದ ಕ್ರೇಜ್ ಹೆಚ್ಚು ಮಾಡಿತ್ತು.  ಅದರ ಜೊತೆಗೆ ಈಗ ಬೆಂಗಳೂರಲ್ಲೂ ಈ ಫಿಫಾ ಫಿವರ್ ಜೋರಾಗಿದೆ.

ತಮ್ಮದೇ ಆ್ಯಂಥಮ್ ಸಾಂಗ್ ಮಾಡಿಕೊಂಡು ವಿದ್ಯಾರ್ಥಿಗಳು ಫುಟ್ಬಾಲ್ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಕತಾರ್ನಲ್ಲಿ ಫಿಫಾ ವಿಶ್ವಕಪ್ ಶುರುವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ ಜನರಲ್ಲೂ ಫುಟ್ಬಾಲ್ ಕ್ರೇಜ್ ಹೆಚ್ಚಿಸಿದೆ.

ನಗರದ ದೊಮ್ಮಲೂರು ಬಳಿ ಇರುವ ಬಿಬಿಎಂಪಿ ಮೈದಾನದಲ್ಲಿ ನಡೆದ ಅಂತರ್ ಕಾಲೇಜು ಫುಟ್ಬಾಲ್ ಟೂರ್ನಮೆಂಟ್ಗೆ ಇಂಡಿಯನ್ ಪೀಲೆ ಎಂದೇ ಖ್ಯಾತಿ ಗಳಿಸಿರುವ ಭಾರತದ ಫುಟ್ಬಾಲ್ ದಂತಕತೆ ನಾರಾಯಣಸ್ವಾಮಿ ಉಲಘನಾಥನ್ ಆಗಮಿಸಿದ್ರು.

ಈ ವೇಳೆ ವಿದ್ಯಾರ್ಥಿಗಳು ಸೇರಿ ಮಾಡಿದ ಆ್ಯಂಥಮ್ ಸಾಂಗ್ ಗಮನಸೆಳೆಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಸ್ವಾಮಿ ಉಲಘನಾಥನ್, ನಾವು ಭಾರತವನ್ನು ಪ್ರತಿನಿಧಿಸುವ ಕಾಲದಲ್ಲಿ ಈಗ ನೋಡುವ ಫುಟ್ಬಾಲ್ ಕ್ರೇಜ್ ಇರಲಿಲ್ಲ.

ಈಗ ನಮ್ಮ ಹುಡುಗರು ಫುಟ್ಬಾಲ್ ಬಗ್ಗೆ ಇಷ್ಟೊಂದು ಉತ್ಸಾಹದಿಂದಿರುವುದು ನೊಡೋಕೆ ಖುಷಿ ಆಗುತ್ತೆ. ಕರ್ನಾಟಕ ನನ್ನ ಎರಡನೇ ತವರು. ಇಲ್ಲಿ ಬರೋದು ಖುಷಿ ಆಗುತ್ತೆ ಎಂದಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜಿ ಸಂಧಾನಕ್ಕೆ ಹೋಗಿದ್ದ ವ್ಯಕ್ತಿಯ ಕೊಲೆ