Select Your Language

Notifications

webdunia
webdunia
webdunia
webdunia

6 ವರ್ಷ ತುಂಬಿದರಷ್ಟೇ ಸ್ಕೂಲ್ ಗೆ ಪ್ರವೇಶ ; ಆದೇಶದಲ್ಲಿ ಏನಿದೆ?

6 ವರ್ಷ ತುಂಬಿದರಷ್ಟೇ ಸ್ಕೂಲ್ ಗೆ  ಪ್ರವೇಶ ; ಆದೇಶದಲ್ಲಿ ಏನಿದೆ?
ಬೆಂಗಳೂರು , ಬುಧವಾರ, 27 ಜುಲೈ 2022 (07:56 IST)
ಬೆಂಗಳೂರು : ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಹೊಸದಾಗಿ ವಯೋಮಿತಿ ನಿಗದಿ ಮಾಡಿರುವ ಸರ್ಕಾರದ ಆದೇಶ ಹಲವು ಗೊಂದಲಗಳಿಗೆ ಕಾರಣವಾಗಿದೆ.

ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಸೇರ್ಪಡೆ ಆಗಬೇಕಾದರೆ ಕಡ್ಡಾಯವಾಗಿ ವಿದ್ಯಾರ್ಥಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ಹೊರಡಿಸಿತ್ತು.

ಒಂದನೇ ತರಗತಿಗೆ ದಾಖಲಾತಿ ಆಗಬೇಕದರೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ಆದೇಶದಲ್ಲಿ ಉಲ್ಲೇಖ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ.

ಆದೇಶದಲ್ಲಿ ಆರ್ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ನ್ನು ಉಲ್ಲೇಖ ಮಾಡಲಾಗಿದೆ. ಈ ಆದೇಶದಲ್ಲಿ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಶಿಕ್ಷಣ ಇಲಾಖೆ ಸರಿಯಾಗಿ ಉತ್ತರ ನೀಡಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಬಯಲಾಯ್ತ ಅಲ್ ಖೈದಾ ಪ್ಲಾನ್!