Select Your Language

Notifications

webdunia
webdunia
webdunia
Sunday, 13 April 2025
webdunia

ಬಯಲಾಯ್ತ ಅಲ್ ಖೈದಾ ಪ್ಲಾನ್!

ಉಗ್ರ ಸಂಘಟನೆ
ಬೆಂಗಳೂರು , ಬುಧವಾರ, 27 ಜುಲೈ 2022 (07:17 IST)
ಬೆಂಗಳೂರು : ನಗರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರ ಬಾಳಲ್ಲಿ ಅಲ್ ಖೈದಾ ರಿಕ್ರೂಟರ್ಗಳು ದೊಡ್ಡ ಆಟವನ್ನೇ ಆಡಿದ್ದಾರೆ.
 
ಪವಿತ್ರ ಕುರಾನ್ ಗ್ರಂಥವನ್ನೇ ತಿರುಚಿರುವ ಉಗ್ರರು ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರಚೋದನೆಗೆ ಒಳಗಾಗುವಂತೆ ಮಾಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಶಂಕಿತರಿಗೆ ಉಗ್ರ ಪ್ರಚೋದನೆ ಹೇಗಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಧರ್ಮಗ್ರಂಥಗಳ ಬಗ್ಗೆ ಅರಿವಿರದ ಯುವಕರಿಗೆ ಕುರಾನ್ನ ತಿರುಚಿದ ಪ್ರತಿ ನೀಡಿ ಪ್ರಚೋದನೆ ನೀಡಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳ ಬಳಿ ತಿರುಚಿದ ಕುರಾನ್ನ ಕೆಲ ಪೇಜ್ಗಳು ಪತ್ತೆಯಾಗಿವೆ. ಅಲ್ ಖೈದಾಗೆ ರಿಕ್ರೂಟ್ ಮಾಡುವಾತ ಕಳುಹಿಸಿರುವ ದಾಖಲೆಗಳಿದ್ದು, ಜಿಹಾದ್, ಕೊಲ್ಲುವುದು, ಷರಿಯತ್ ಕಾನೂನು ಎಲ್ಲವನ್ನು ಸೇರಿಸಲಾಗಿದೆ.

ಪವಿತ್ರ ಗ್ರಂಥವನ್ನು ತಿರುಚಿದನ್ನೇ ಕುರಾನ್ ಎಂದು ನಂಬಿರುವ ಶಂಕಿತರು, ಕುರಾನ್ ಅನ್ವಯವಾಗಿ ಬದುಕಬೇಕು. ಅಲ್ಲಾನಿಗೋಸ್ಕರ ಜಿಹಾದ್ ಮಾಡಬೇಕು ಎಂದು ಬರೆದಿರುವ ತಿರುಚಿದ ಕುರಾನ್ ಅನ್ನು ಶಂಕಿತರಿಗೆ ನೀಡಲಾಗಿದೆ. ಇದರ ಪ್ರಭಾವಕ್ಕೆ ಒಳಗಾಗಿ ಅಲ್ ಖೈದಾ ಸೇರಬೇಕು ಎಂಬುದು ನೇಮಕಾತಿ ಮಾಡಿಕೊಂಡಿದ್ದವನ ಸಂಚಾಗಿತ್ತು ಎಂಬ ಸತ್ಯ ಬಯಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಕಳ್ಳತನವಾದರೆ ಎಫ್.ಐ.ಆರ್ ಕಡ್ಡಾಯ...!!!