Publish Date: Mon, 23 Jan 2023 (11:30 IST)
Updated Date: Mon, 23 Jan 2023 (12:09 IST)
ಬೆಂಗಳೂರು : ಜನಪ್ರಿಯ ಯೋಜನೆಗಳ ಬಗ್ಗೆ ಪ್ಲ್ಯಾನ್ ಮಾಡಿ, ಬ್ಲೂಪ್ರಿಂಟ್ ಕೊಡಿ. ಫೆಬ್ರವರಿ ಮೂರನೇ ವಾರದಲ್ಲಿ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ.
ಚುನಾವಣೆ ಹತ್ತಿರದ ಬಜೆಟ್ ಆಗಿರುವ ಕಾರಣ ಬಂಪರ್ ಗಿಫ್ಟ್ಗಳ ಸುರಿಮಳೆ ಸಾಧ್ಯತೆ ಇದೆ.
ಜನಪ್ರಿಯ ಬಜೆಟ್ ಮಂಡಿಸಲು ಈಗಾಗಲೇ ಬ್ಲೂಪ್ರಿಂಟ್ ರೆಡಿ ಮಾಡುವಂತೆ ಸೂಚನೆ ನೀಡಿದ್ದಾರಂತೆ. ಕಾಂಗ್ರೆಸ್ ಪ್ರಣಾಳಿಕೆಯ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ತಂತ್ರ ನಡೆಸಿದ್ದು, ಕಾಂಗ್ರೆಸ್ ಭರವಸೆಗಳ ಸುರಿಮಳೆಗೆ ತಡೆ ಹಾಕಲು ಬಜೆಟ್ ಘೋಷಣೆ ಅಸ್ತ್ರ ಪ್ರಯೋಗ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪ್ರಮುಖವಾಗಿ 5 ವರ್ಗಗಳನ್ನು ತಲುಪುವ 5 ಜನಪ್ರಿಯ ಕಾರ್ಯಕ್ರಮಗಳ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಪ್ಲ್ಯಾನ್ ಕೊಡುವಂತೆ ಸಿಎಂ ಸೂಚಿಸಿದ್ದು, ಜನವರಿ ಕಡೆ ವಾರದಿಂದ ಬಜೆಟ್ ಸಿದ್ಧತಾ ಸಭೆಗಳನ್ನು ನಡೆಸಲು ಸಿಎಂ ಮುಂದಾಗಿದ್ದಾರೆ.