Select Your Language

Notifications

webdunia
webdunia
webdunia
webdunia

ಒಂದೂವರೆ ವರ್ಷಗಳಿಂದ ಡ್ರಗ್ ಪ್ರಕರಣಗಳು ಬಯಲಾಗುತ್ತಿವೆ: ಸುಪ್ರೀಂ

ಒಂದೂವರೆ ವರ್ಷಗಳಿಂದ ಡ್ರಗ್ ಪ್ರಕರಣಗಳು ಬಯಲಾಗುತ್ತಿವೆ: ಸುಪ್ರೀಂ
ನವದೆಹಲಿ , ಶುಕ್ರವಾರ, 29 ಅಕ್ಟೋಬರ್ 2021 (11:47 IST)
ನವದೆಹಲಿ : ದೇಶಾದ್ಯಂತ ಕಳೆದ ಒಂದೂವರೆ ವರ್ಷಗಳಿಂದ ಡ್ರಗ್ ಪ್ರಕರಣಗಳು ಬಯಲಾಗುತ್ತಿವೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕೆಟಿಎಸ್ ತುಳಸಿ ಪ್ರತಿಕ್ರಿಯಿಸಿದ್ದು, ಸಮತೋಲಿತ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಗೆ ಸರಕಾರ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ. ದೇಶದಲ್ಲಿ ಮದ್ಯ, ಗುಟ್ಕಾ, ತಂಬಾಕು ಬಳಕೆಗೆ ಹೇಗೆ ಅವಕಾಶ ನೀಡಿದ್ದಾರೋ ಅದೇ ರೀತಿ ತೆರಿಗೆ ಪಾವತಿಸಿ ಮಾದಕ ದ್ರವ್ಯ ಬಳಸಲು ಅವಕಾಶ ಕಲ್ಪಿಸಬೇಕು ಅಂತ ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡ್ರಗ್ಸ್ ತೆಗೆದುಕೊಂಡ್ರೆ ಜೀವನದಲ್ಲಿ ಉಂಟಾದ ನೋವುಗಳನ್ನ ಮರೀಬಹುದು. ಮದ್ಯ, ತಂಬಾಕು, ಗುಟ್ಕಾ ಕೂಡ ನಮಗೆ ಹಾನಿ ಮಾಡುತ್ತೆ. ಆದ್ರೆ ಅವುಗಳ ಬಳಕೆಗೆ ಅನುಮತಿಸಲಾಗಿದೆ. ಅದೇ ರೀತಿ ಏಕೆ ಡ್ರಗ್ಸ್ ಸೇವಿಸಲು ಅನುಮತಿಸಬಾರದು? ಹೆಚ್ಚಿನ ಸಂದರ್ಭಗಳಲ್ಲಿ ಔಷಧಿಗಳ ಮೂಲಕ ಡ್ರಗ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಅಂತಹದರಲ್ಲಿ ಮಾದಕ ಡ್ರಗ್ಸ್ ಬಳಕೆಗೆ ಅವಕಾಶ ನೀಡಬಾರದೇ ಅಂತ   ತುಳಸಿ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಡನ್ ಮತ್ತು ಹ್ಯಾರಿಸ್ ಮಧ್ಯೆ ಶೀತಲ ಸಮರ!