Select Your Language

Notifications

webdunia
webdunia
webdunia
webdunia

ಉಕ್ರೇನ್‍ನಿಂದ ಪಲಾಯನಗೊಂಡವರ ಸಂಖ್ಯೆ ಎಷ್ಟು ಗೊತ್ತ?

ಉಕ್ರೇನ್‍ನಿಂದ ಪಲಾಯನಗೊಂಡವರ ಸಂಖ್ಯೆ ಎಷ್ಟು ಗೊತ್ತ?
ಜಿನೆವಾ , ಗುರುವಾರ, 3 ಮಾರ್ಚ್ 2022 (11:05 IST)
ಜಿನೆವಾ : ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್ನಿಂದ ಕೇವಲ ಒಂದು ವಾರದಲ್ಲಿ 1 ಮಿಲಿಯನ್ ಜನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇದು ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಾಗಿ ಪರಿಣಮಿಸುವ ಪರಿಸ್ಥಿತಿಯನ್ನು ತೋರಿಸುತ್ತದೆ. ವಿಶ್ವ ಬ್ಯಾಂಕ್ 2020ರ ಅಂತ್ಯದಲ್ಲಿ ನಡೆಸಿದ ಎಣಿಕೆಯಲ್ಲಿ ಉಕ್ರೇನ್ ಸುಮಾರು 44 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿತ್ತು.

ಆದರೆ ಒಂದು ವಾರದೊಳಗೆ ಉಕ್ರೇನ್ನಿಂದ ಶೇಕಡ 2ಕ್ಕಿಂತ ಹೆಚ್ಚು ಮಂದಿ ಪಲಾಯಾನ ಮಾಡುತ್ತಿದ್ದಾರೆ. ಅಲ್ಲದೇ ಮುಂದೆ 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ. 

ಮತ್ತೊಂದೆಡೆ ವಿಶ್ವಸಂಸ್ಥೆ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಅವರು ತಮ್ಮ ಟ್ವಿಟ್ಟರ್ನಲ್ಲಿ, ಕೇವಲ ಏಳು ದಿನಗಳಲ್ಲಿ ಉಕ್ರೇನ್ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮರ್ಮಾಂಗಕ್ಕೆ ಕತ್ತರಿ ಹಾಕಿ ವ್ಯಕ್ತಿ ಆತ್ಮಹತ್ಯೆ!