Publish Date: Wed, 02 Mar 2022 (16:32 IST)
Updated Date: Wed, 02 Mar 2022 (18:44 IST)
ಕೀವ್ : ಯುದ್ಧಪೀಡಿತ ಉಕ್ರೇನ್ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿ ಪಂಜಾಬ್ ಮೂಲದವನು ಎಂದು ಗುರುತಿಸಲಾಗಿದೆ. ಪಂಜಾಬ್ನ ಬರ್ನಾಲಾ ಮೂಲದ ಚಂದನ್ ಜಿಂದಾಲ್ (22), ಉಕ್ರೇನ್ನಲ್ಲಿ ಮಿದುಳು ಪಾರ್ಶ್ವವಾಯುವಿನಿಂದ (ಬ್ರೈನ್ ಸ್ಟ್ರೋಕ್) ಮೃತಪಟ್ಟಿದ್ದಾನೆ.
ಚಂದನ್ ಜಿಂದಲ್, ವಿನ್ನಿಟ್ಸಿಯಾ ಉಕ್ರೇನ್ನಲ್ಲಿರುವ ಮೆಮೊರಿಯಲ್ ಮೆಡಿಕಲ್ ಯೂನಿವರ್ಸಿಟಿಯ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಫೆಬ್ರವರಿ 2 ರಂದು ಈತ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಿದುಳು ಪಾರ್ಶ್ವವಾಯುವಿಗೆ ಒಳಗಾದ ನಂತರ ಜಿಂದಾಲ್ ಅವರನ್ನು ವಿನ್ನಿಟ್ಸಿಯಾ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು.