Publish Date: Wed, 02 Mar 2022 (11:21 IST)
Updated Date: Wed, 02 Mar 2022 (11:24 IST)
ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಕೇವಲ ಉಕ್ರೇನ್ ಮಾತ್ರವಲ್ಲ ಇಡೀ ಜಗತ್ತಿನ ಜನ ಕಂಗೆಟ್ಟಿದ್ದಾರೆ.
ಉಕ್ರೇನ್ ನಾಗರಿಕರು ರಷ್ಯಾ ದಾಳಿಗೆ ಜೀವಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಾಬಾ ವಾಂಗಾ ಭವಿಷ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಹಿಂದೆ ಹಲವು ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಇದೀಗ ಯುದ್ಧದಲ್ಲಿ ಯಾರು ಹೆಚ್ಚು ಬಲ, ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದ್ದು,
ಈ ವಿಚಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ. ಬಾಬಾ ವಾಂಗಾ ಭವಿಷ್ಯದ ಪ್ರಕಾರ ರಷ್ಯಾ ಅಧ್ಯಕ್ಷ ಉಕ್ರೇನ್ ಯುದ್ಧದ ಬಳಿಕ ಇನ್ನಷ್ಟು ಬಲಶಾಲಿಯಾಗಲಿದ್ದಾರೆ. ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ. ಭವಿಷ್ಯದಲ್ಲಿ ರಷ್ಯಾ ಜಗತ್ತಿನ ರಾಜನಾಗಲಿದೆ.
ಆದರೆ ಯುರೋಪ್ ಪಾಳುಭೂಮಿಯಾಗಲಿದೆ. ಎಲ್ಲವೂ ಹಿಮದಂತೆ ಕರಗುತ್ತದೆ, ಒಂದೇ ಒಂದು ವಿಷಯವನ್ನು ವ್ಲಾಡಿಮಿರ್ ಪುಟಿನ್ ಅವರ ವೈಭವ, ರಷ್ಯಾದ ವೈಭವವನ್ನು ಯಾರೂ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ . ರಷ್ಯಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಷ್ಯಾ ತನ್ನ ಹಾದಿಯಿಂದ ಎಲ್ಲರನ್ನು ತೆಗೆದುಹಾಕುತ್ತದೆ ಮತ್ತು ಜಗತ್ತನ್ನು ಆಳುತ್ತದೆ ಎಂದಿದ್ದಾರೆ.