Publish Date: Sun, 08 Jul 2018 (08:21 IST)
Updated Date: Sun, 08 Jul 2018 (08:22 IST)
ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪಗಳಿಗೆ ಹಾಜರಾಗದೇ ಇರುವ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದರು.
ಮೊನ್ನೆಯ ಕಲಾಪದಲ್ಲಿ ಡಿಸಿಎಂ ಪರಮೇಶ್ವರ್ ಮತ್ತು ಮುಖ್ಯ ಸಚೇತಕರಿಗೆ ಶಾಸಕರು ಹಾಜರಾಗುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಸ್ಪೀಕರ್ ಬಿಸಿ ಮುಟ್ಟಿಸಿದ್ದರು.
ಅದರ ಪರಿಣಾಮ ಡಿಸಿಎಂ ಪರಮೇಶ್ವರ್ ತಮ್ಮ ಪಕ್ಷದ ಶಾಸಕರು, ಸಚಿವರಿಗೆ ಪತ್ರ ಬರೆದಿದ್ದು, ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗಲು ಸೂಚಿಸಿದ್ದಾರೆ. ಪ್ರಮುಖ ಚರ್ಚೆಗಳ ಸಂದರ್ಭದಲ್ಲಿ ಶಾಸಕರು, ಸಚಿವರು ಇಲ್ಲದೇ ಕಲಾಪ ಬಣಗುಡುತ್ತಿರುವುದರ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಆರಂಭದಿಂದಲೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅದಕ್ಕೀಗ ತಕ್ಕ ಫಲ ಸಿಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.