Publish Date: Sat, 07 Jul 2018 (09:09 IST)
Updated Date: Sat, 07 Jul 2018 (09:11 IST)
ಬೆಂಗಳೂರು: ಸದನ ಕಲಾಪದಲ್ಲಿ ಭಾಗವಹಿಸದೇ ಉದಾಸೀನ ತೋರುತ್ತಿರುವ ಶಾಸಕರಿಗೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ.
ಪದೇ ಪದೇ ನೋಟಿಸ್ ನೀಡಿದರೂ ಸದನಕ್ಕೆ ಹಾಜರಾಗದ ಶಾಸಕರ ವಿರುದ್ಧ ಸ್ಪೀಕರ್ ಕೆಂಡಾಮಂಡಲರಾಗಿದ್ದು, ಹೀಗೇ ಮುಂದುವರಿದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.
ಸದನದಲ್ಲಿ ಹಾಜರಿರದ ಸಚಿವರು, ಶಾಸಕರಿಗೆ ನೀವು ನೋವಾಗದಂತೆ ತಿಳಿಹೇಳಬೇಕು. ಒಂದು ವೇಳೆ ಗೈರು ಹಾಜರಾಗಲೇ ಬೇಕಿದ್ದರೆ ಪೂರ್ವಾನುಮತಿ ಪಡೆಯಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಮುಖ್ಯ ಸಚೇತಕರಿಗೆ ಸೂಚಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.