ನವದೆಹಲಿ : ಈ ವರ್ಷದ ಮೊದಲ ಚಂಡಮಾರುತ ಮೋಚಾ ಒಡಿಶಾಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಚುನಾವಣೆಯ ಕಾವಿನಲ್ಲಿರುವ ಕರ್ನಾಟಕಕ್ಕೂ ಮೋಚಾ ಚಂಡಮಾರುತದ ಎಫೆಕ್ಟ್ ಇರಲಿದೆ ಎನ್ನಲಾಗಿದೆ.
ಐಎಂಡಿ ಮುನ್ಸೂಚನೆ ಪ್ರಕಾರ ಮೇ 6ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ವಾಯುಭಾರ ಕುಸಿತದ ಹಿನ್ನೆಲೆ ಚಂಡಮಾರುತ ಉಂಟಾಗಲಿದ್ದು, ಬಳಿಕ ಇದು ತೀವ್ರಗೊಂಡು ಮಧ್ಯ ಬಂಗಾಳಕೊಲ್ಲಿಯ ಕಡೆಗೆ ಸುಮಾರು ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇದೀಗ ಸಂಭವನೀಯ ಮೋಚಾ ಚಂಡಮಾರುತದ ಹಿನ್ನೆಲೆ ಐಎಂಡಿಯಿಂದ ರಾಜ್ಯಗಳಿಗೆ ಹೈ ಅಲರ್ಟ್ ನೀಡಲಾಗಿದೆ. ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚನೆ ನೀಡಿದೆ.