Select Your Language

Notifications

webdunia
webdunia
webdunia
webdunia

ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು!

ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು!
ಭುವನೇಶ್ವರ , ಸೋಮವಾರ, 30 ಜನವರಿ 2023 (10:29 IST)
ಭುವನೇಶ್ವರ : ಗುಂಡಿನ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾದ ಆರೋಗ್ಯ ಸಚಿವ ಹಾಗೂ ಬಿಜೆಡಿ ಹಿರಿಯ ನಾಯಕ ನಬಾ ದಾಸ್ (61) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ದಾಸ್ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬ ಗುಂಡು ಹಾರಿಸಿದ್ದ. 

ತಕ್ಷಣವೇ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಚಿಕಿತ್ಸೆಗೆಂದು ಏರ್ ಲಿಫ್ಟ್ ಮಾಡಲಾಗಿತ್ತು. ಅವರ ಎದೆಯ ಭಾಗಕ್ಕೆ ಬುಲೆಟ್ ತಗುಲಿದ್ದರಿಂದ ತೀವ್ರವಾಗಿ ಗಾಯವಾಗಿತ್ತು. ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಡಿಕ್ಕಿಯಿಂದ 30 ಕುರಿಗಳು ಸಾವು!