Webdunia - Bharat's app for daily news and videos

Install App

ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಸ್ಕೆಚ್..!

Webdunia
ಶುಕ್ರವಾರ, 5 ಮೇ 2023 (08:30 IST)
ಕೀವ್ : ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ.

ಉಕ್ರೇನ್ ಸಹ ರಷ್ಯಾಗೆ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದೆ. ಈ ಬಾರಿ ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಯತ್ನಿಸಿದ್ದು, ಪುಟಿನ್ ನಿವಾಸದ ಮೇಲೆ ಎರಡು ಡ್ರೋನ್ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ.

ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾಪಡೆಗಳು ಎರಡೂ ಡ್ರೋನ್ಗಳನ್ನ ಹೊಡೆದುರುಳಿಸಿದ್ದು, ಈ ದಾಳಿ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ದೂರಿದೆ. 

ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಎರಡು ಶಸ್ತ್ರಾಸ್ತ್ರ ತುಂಬಿದ ಡ್ರೋನ್ಗಳಿಂದ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್ಗಳನ್ನ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಪುಟಿನ್ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ. ಉಕ್ರೇನ್ನಿಂದ ಈ ದಾಳಿ ನಡೆದಿದೆ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments