Publish Date: Tue, 03 Jan 2023 (11:03 IST)
Updated Date: Tue, 03 Jan 2023 (11:35 IST)
ವಿಜಯಪುರ : ಶ್ರೀಗಳು ವೀಲ್ನಲ್ಲಿ ಬರೆದಿಟ್ಟಿರುವಂತೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಮಾತನಾಡಿದ ಅವರು, ಶ್ರೀಗಳು ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ.
ಸಿದ್ದೇಶ್ವರ ಶ್ರೀಗಳಿಂದಲೇ ವಿಜಯಪುರ ಜಿಲ್ಲೆಗೆ ಒಂದು ಉನ್ನತ ಸ್ಥಾನವಿತ್ತು ಅಂತಹ ಶ್ರೀಗಳು ಇನ್ನಿಲ್ಲ. ಶ್ರೀಗಳನ್ನು ಕಳೆದುಕೊಂಡ ವಿಜಯಪುರ ಜನ ಬಡವರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇನ್ನು ಶ್ರೀಗಳ ದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.